Saturday, June 6, 2026
Homeಕರಾವಳಿಪಾಕಿಸ್ತಾನದ ಏಜೆಂಟ್ ಗಳು ಹುಟ್ಟಿಕೊಳ್ಳೊದೇ ಮಂಗಳೂರಲ್ಲಿ: ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿಕೆ

ಪಾಕಿಸ್ತಾನದ ಏಜೆಂಟ್ ಗಳು ಹುಟ್ಟಿಕೊಳ್ಳೊದೇ ಮಂಗಳೂರಲ್ಲಿ: ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿಕೆ

- Advertisement -
- Advertisement -

ಚಾಮರಾಜನಗರ: ಮಂಗಳೂರಿನಲ್ಲಿ ಹಲವು ಸಂಘಟನೆಗಳಿವೆ. ಪಾಕಿಸ್ತಾನದ ಏಜೆಂಟ್ ಗಳೂ ಹುಟ್ಟಿಕೊಳ್ಳೊದೆ ಮಂಗಳೂರಲ್ಲಿ ಎಂದು ಚಾಮರಾಜನಗರದಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ.
ಮಂಗಳೂರು, ಕೇರಳ,ದೆಹಲಿ ಸೇರಿದಂತೆ ಎಲ್ಲೇ ಹುಟ್ಟಿಕೊಳ್ಳಲಿ,ಅವರನ್ನು ಸದೆ ಬಡಿಯುತ್ತೇವೆ. ಯಾವುದೇ ಕಾರಣಕ್ಕೂ ಅವರನ್ನು ಬಿಡಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಗೌರವಕ್ಕೆ ಸಾರ್ವಭೌಮತೆಗೆ ಕುಂದು ತರುವ ಸಂಸ್ಥೆಯನ್ನು ಬಿಡಲ್ಲ ಎಂದ್ರು. ಯಾವುದನ್ನು ಯಾವ ಕಾಲ ಘಟದಲ್ಲಿ ಬ್ಯಾನ್ ಮಾಡಬೇಕು,ಮಾಡ್ತೇವೆ ಎಂದಿದ್ದಾರೆ.


ಇನ್ನು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಹಾಗೂ ಚೋಟಾ ಪಾಕಿಸ್ತಾನ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಇಂತಾ ಪ್ರವೃತ್ತಿ ಜಮ್ಮು ಕಾಶ್ಮೀರದಲ್ಲಿ ಪ್ರಾರಂಭವಾಗಿತ್ತು. ಹಿಂದಿನ ಸರ್ಕಾರ ಇದನ್ನು ನಿಗ್ರಹಿಸಲು ವಿಫಲರಾಗಿತ್ತು. ಪಾಕಿಸ್ತಾನದಲ್ಲಿ ಸರ್ಕಾರ ಬದಲಾವಣೆಯಾದಾಗ ಇಂತಾ ಪ್ರವೃತ್ತಿ ಮತ್ತೇ ಪ್ರಾರಂಭವಾಗಿದೆ. ಇವುಗಳನ್ನು ನಿಗ್ರಹಿಸುವ ಶಕ್ತಿ ಭಾರತಕ್ಕಿದೆ, ನಿಗ್ರಹ ಮಾಡ್ತೀವಿ ಎಂದಿದ್ದಾರೆ.


ಪಾಕಿಸ್ತಾನದ ಏಜೆಂಟ್ ನಂತೆ ನಡೆದು ಕೊಳ್ಳುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ, ಕೇಂದ್ರ ಸರ್ಕಾರ ಶಕ್ತವಾಗಿದೆ. ಧರ್ಮ ಸಂಘರ್ಷ ಪ್ರಕರಣ ನಡೆದಾಗ ನಿರ್ಲಕ್ಷ್ಯ ಮಾಡಿಲ್ಲ. ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ಮಾಡಲಾಗಿದೆ,ಬಂಧಿಸಲಾಗ್ತಿದೆ ಎಂದ್ರು.

- Advertisement -

Latest News

error: Content is protected !!