Friday, June 5, 2026
Homeಕರಾವಳಿಸುಳ್ಯ: ನೇಣು ಬಿಗಿದುಕೊಂಡು ವಿವಾಹಿತ ಯುವತಿ ಆತ್ಮಹತ್ಯೆ

ಸುಳ್ಯ: ನೇಣು ಬಿಗಿದುಕೊಂಡು ವಿವಾಹಿತ ಯುವತಿ ಆತ್ಮಹತ್ಯೆ

- Advertisement -
- Advertisement -

ಸುಳ್ಯ: ವಿವಾಹಿತ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸುಳ್ಯದ ಗಾಂಧಿನಗರದಲ್ಲಿ ನಡೆದಿದೆ.ಗಾಂಧಿನಗರದ ಕೆರೆಮೂಲೆ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಅಮೀನಾ ಎಂಬವರ ಪುತ್ರಿ ಆಯೀಶಾ ಆತ್ಮಹತ್ಯೆಗೆ ಶರಣಾದವರು.

ಫ್ಯಾನ್ ಗೆ ನೇಣು ಬಿಗಿದುಕೊಂಡು ಆಯೀಶಾ ಆತ್ಮಹತ್ಯೆ ಶರಣಾಗಿದ್ದು, ಆಕೆಯನ್ನು ಕೂಡಲೇ ಮನೆಯವರು ಕೆಳಗಿಳಿಸಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಅಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಳೆದ ವರ್ಷವಷ್ಟೇ ಕಾಸರಗೋಡಿನ ಯುವಕನೊಂದಿಗೆ ಆಯೀಶಾ ವಿವಾಹವಾಗಿತ್ತು. ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ

- Advertisement -

Latest News

error: Content is protected !!