Saturday, June 6, 2026
Homeತಾಜಾ ಸುದ್ದಿಕೊಪ್ಪಳ: ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ, ಇಬ್ಬರು ಮಕ್ಕಳ ಸಾವು

ಕೊಪ್ಪಳ: ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ, ಇಬ್ಬರು ಮಕ್ಕಳ ಸಾವು

- Advertisement -
- Advertisement -

ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಮೆಯಲ್ಲಿ ಬಟ್ಟೆ ಒಣ ಹಾಕುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ನಿಂದಾಗಿ ತಾಯಿ ಶೈಲಮ್ಮ (28), ಮಕ್ಕಳಾದಂತ ಪವನ್ (2) ಹಾಗೂ ಸಾನ್ವಿ (3) ಎಂಬುವರು ಸ್ಥಳದಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ.


ತಾಯಿ ಶೈಲಮ್ಮ ಬಟ್ಟೆ ಒಣಗಾಗುವ ವೇಳೆಯಲ್ಲಿ 2 ವರ್ಷದ ಮಗ ಪವನ್ ಅನ್ನು ಎತ್ತಿಕೊಂಡು, ಪಕ್ಕದಲ್ಲೇ ಇದ್ದಂತ ಮತ್ತೊಬ್ಬ ಮೂರು ವರ್ಷದ ಮಗಳು ಸಾನ್ವಿಯನ್ನು ಇಟ್ಟುಕೊಂಡು ಒಣ ಹಾಕುತ್ತಿದ್ದರು. ಈ ವೇಳೆ ಹಸಿ ಬಟ್ಟೆ ವಿದ್ಯುತ್ ವಯರ್ ಗೆ ತಾಗಿ, ಶಾಕ್ ನಿಂದ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದಾರೆ.

ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Latest News

error: Content is protected !!