Saturday, June 6, 2026
Homeಕರಾವಳಿಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಶ್ರೀ ಗುರುದೇವ ಕಾಲೇಜಿನ ಬಗ್ಗೆ ಅಪಪ್ರಚಾರ, ಸೈಬರ್ ಕ್ರೈಂಗೆ ದೂರು

ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಶ್ರೀ ಗುರುದೇವ ಕಾಲೇಜಿನ ಬಗ್ಗೆ ಅಪಪ್ರಚಾರ, ಸೈಬರ್ ಕ್ರೈಂಗೆ ದೂರು

- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ಶ್ರೀ ಗುರುದೇವ ಪದವಿಪೂರ್ವ ಕಾಲೇಜು ಬೆಳ್ತಂಗಡಿ ಇದರ ಬಗ್ಗೆ ಜೆಜೆಟಿ(ಜಸ್ಟ್ ಜಿಹಾದಿ ಥಿಂಗ್ಸ್)ಎಂಬ ನಕಲಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಕಾಲೇಜಿನ ಹಿಂದೂ ವಿದ್ಯಾರ್ಥಿನಿಯ ಭಾವಚಿತ್ರವನ್ನು ಮುಸ್ಲಿಂ ವಿದ್ಯಾರ್ಥಿಯ ಫೋಟೋವನ್ನು ಸಂಬಂಧ ಕಲ್ಪಿಸಿ ಹಾಕಿ, ಕಾಲೇಜಿನ ಬಗ್ಗೆ ಮಾನಹಾನಿಕರ ಬರಹದ ಮೂಲಕ ಅಪಪ್ರಚಾರ ಮಾಡಲಾಗಿದೆ.

ಈ ಬಗ್ಗೆ ಸೂಕ್ತರೀತಿಯ ತನಿಖೆಯ ಮೂಲಕ ನಕಲಿ ಖಾತೆಯನ್ನು ಹಾಗೂ ನಕಲಿ ಖಾತೆ ನಿರ್ವಾಹಕನನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಂಸ್ಥೆ ಹಾಗೂ ವಿದ್ಯಾರ್ಥಿನಿಯ ಪೋಷಕರು ಬೆಳ್ತಂಗಡಿ ಪೋಲಿಸ್ ಠಾಣೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಕ್ರೈಂ ವಿಭಾಗದಲ್ಲಿ ಲಿಖಿತ ದೂರು ದಾಖಲಿಸಿದ್ದು ಈಗಾಗಲೇ ತನಿಖೆ ಆರಂಭವಾಗಿದೆ.

- Advertisement -

Latest News

error: Content is protected !!