Saturday, June 6, 2026
Homeಕರಾವಳಿರಾಜ್ಯ ಸರ್ಕಾರದ ರೂಲ್ಸ್ ಬ್ರೇಕ್ ಮಾಡಿದ ನಳೀನ್ ಕುಮಾರ್ ಕಟೀಲು

ರಾಜ್ಯ ಸರ್ಕಾರದ ರೂಲ್ಸ್ ಬ್ರೇಕ್ ಮಾಡಿದ ನಳೀನ್ ಕುಮಾರ್ ಕಟೀಲು

- Advertisement -
- Advertisement -

ಹುಬ್ಬಳ್ಳಿ: ಕೋವಿಡ್ ನಾಲ್ಕನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ರಾಜ್ಯ ಸರ್ಕಾರ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಆದರೆ ಇಂದು ಹುಬ್ಬಳ್ಳಿಯಲ್ಲಿ ಆಡಳಿತ ಪಕ್ಷ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ರಾಜ್ಯ ಸರ್ಕಾರದ ಆದೇಶವನ್ನು ಗಾಳಿಗೆ ತೂರಿದ್ದಾರೆ.

ಕೆಲವು ದಿನಗಳ ಹಿಂದೆ ಗಲಭೆ ನಡೆದಿದ್ದ ಹಳೇ ಹುಬ್ಬಳ್ಳಿ ಪ್ರದೇಶಕ್ಕೆ ನಳೀನ್ ಕುಮಾರ್ ಭೇಟಿ ನೀಡಿದ್ದಾರೆ. ಸರ್ಕಾರ ಮಾಸ್ಕ್ ಕಡ್ಡಾಯ ಮಾಡಿದ್ರೂ ಜನರ ಗುಂಪು ಕಟ್ಟಿಕೊಂಡು ಮಾಸ್ಕ್ ಇಲ್ಲದೇ ಕಟೀಲ್ ಭೇಟಿ ನೀಡಿದ್ದಾರೆ.

ದಡ್ಡಿ ಓಣಿ, ಹನುಮಂತ ದೇವಸ್ಥಾನ, ಸಂಜೀವಿನಿ ಆಸ್ಪತ್ರೆ ಸೇರಿದಂತೆ ವಿವಿಧ ಕಡೆ ಭೇಟಿ ನೀಡಿರುವ ನಳೀನ್ ಕುಮಾರ್ ಕಟೀಲ್
ಸರ್ಕಾರದ ಅದೇಶ ಪರಿಗಣಿಸದೇ ಓಡಾಟ ನಡೆಸಿದ್ದಾರೆ.

ಹೀಗಾಗಿ ಆಡಳಿತ ಪಕ್ಷದ ರಾಜ್ಯಾಧ್ಯಕ್ಷರಿಂದಲೇ ರಾಜ್ಯ ಸರ್ಕಾರದ ರೂಲ್ಸ್ ಬ್ರೇಕ್ ಮಾಡಿದಂತಾಗಿದೆ.

- Advertisement -

Latest News

error: Content is protected !!