Saturday, June 6, 2026
Homeಕರಾವಳಿವಿದೇಶದಿಂದ ಮಂಗಳೂರಿಗೆ ಬರುವವರಿಗೆ ಕ್ವಾರಂಟೈನ್ ಗಾಗಿ 06 ಹಾಸ್ಟೆಲ್, 18 ಲಾಡ್ಜ್ ನಲ್ಲಿ ವ್ಯವಸ್ಥೆ

ವಿದೇಶದಿಂದ ಮಂಗಳೂರಿಗೆ ಬರುವವರಿಗೆ ಕ್ವಾರಂಟೈನ್ ಗಾಗಿ 06 ಹಾಸ್ಟೆಲ್, 18 ಲಾಡ್ಜ್ ನಲ್ಲಿ ವ್ಯವಸ್ಥೆ

- Advertisement -
- Advertisement -

ಮಂಗಳೂರು, ಮೇ.10: ವಿದೇಶಗಳಿಂದ ಮಂಗಳೂರಿಗೆ ಆಗಮಿಸುವ ಅನಿವಾಸಿ ಭಾರತೀಯರನ್ನು ಕ್ವಾರಂಟೈನ್‌ನಲ್ಲಿ ಇರಿಸಲು ಜಿಲ್ಲಾಡಳಿತವು ಸಕಲ ವ್ಯವಸ್ಥೆಯನ್ನು ಮಾಡಿಕೊಂಡಿದ್ದು, 6 ಹಾಸ್ಟೆಲ್‌ ಹಾಗೂ 18 ಖಾಸಗಿ ಹೊಟೇಲ್‌ ಮತ್ತು ಲಾಡ್ಜ್‌ಗಳನ್ನು ಸಿದ್ಧಪಡಿಸಲಾಗಿದೆ.

ಮೇ 12 ರಂದು ದುಬೈನಿಂದ 170 ಪ್ರಯಾಣಿಕರನ್ನು ಹೊತ್ತ ಮೊದಲ ವಿಮಾನವು ಮಂಗಳೂರಿಗೆ ಆಗಮಿಸಲಿದ್ದು, ಅದರಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ಮಾತ್ರ ಮಂಗಳೂರಿನಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ ಮಾಡಲಾಗುತ್ತದೆ. ಉಡುಪಿ, ಉತ್ತರ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಪ್ರಯಾಣಿಕರನ್ನು ಅವರವರ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗುತ್ತದೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!