Saturday, May 4, 2024
Homeಮಹಾನ್ಯೂಸ್ಮುಂಬೈ: ಮನೆ ಕುಸಿತ, ಅವಶೇಷದಡಿಯಿಂದ 14 ಜನರ ರಕ್ಷಣೆ

ಮುಂಬೈ: ಮನೆ ಕುಸಿತ, ಅವಶೇಷದಡಿಯಿಂದ 14 ಜನರ ರಕ್ಷಣೆ

spot_img
- Advertisement -
- Advertisement -

ಮುಂಬೈ,ಮೇ 10: ಮುಂಬೈನ ಕಾಂದಿವಲಿ ಉಪನಗರದಲ್ಲಿ ಇಂದು ಬೆಳಗ್ಗೆ ಮನೆಯೊಂದು ಕುಸಿದುಬಿದ್ದಿದ್ದು, ಮನೆಯ ಅವಶೇಷದಡಿ ಸಿಲುಕಿ ಹಾಕಿಕೊಂಡಿದ್ದ 14 ಜನರನ್ನು ರಕ್ಷಿಸಲಾಗಿದೆ .

ಪ್ರಾಥಮಿಕ ವರದಿಯ ಪ್ರಕಾರ, ಲಾಲ್‌ಜಿ ಪಾಡಾ ಪ್ರದೇಶದ ಲಿಂಕ್‌ರೋಡ್‌ನ ದೀಪ್‌ಜ್ಯೋತಿ ಚಾಳ್‌ನಲ್ಲಿ ಬೆಳಗ್ಗೆ 5 ಗಂಟೆಯ ಸುಮಾರಿಗೆ ಗೋಡೆಯ ಪಾರ್ಶ್ವಭಾಗ ಕುಸಿದುಬಿದ್ದಿದೆ. ಅಗ್ನಿಶಾಮಕ ಇಲಾಖೆಗೆ ಕರೆ ಮಾಡಲಾಗಿದ್ದು, ಬೆಳಗ್ಗೆ 5:30ಕ್ಕೆ ರಕ್ಷಣಾ ಅಧಿಕಾರಿಗಳು ಘಟನಾಸ್ಥಳ ತಲುಪಿದ್ದಾರೆ.

ಮನೆಯ ಮೇಲ್ಭಾಗದಲ್ಲಿದ್ದ 12 ಜನರನ್ನು ರಕ್ಷಿಸಲಾಗಿದ್ದು,ಅವಶೇಷಗಳಡಿ ಸಿಲುಕಿದ್ದ ಇಬ್ಬರನ್ನು ಅಗ್ನಿಶಾಮಕದಳ ಗ್ಯಾಸ್ ಕಟ್ಟರ್ ಬಳಸಿ ರಕ್ಷಿಸಿದ್ದಾರೆ.

ಅವಶೇಷಗಳಡಿ ಸಿಲುಕಿರುವ ಇನ್ನಿತರರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

- Advertisement -
spot_img

Latest News

error: Content is protected !!