Saturday, June 6, 2026
Homeತಾಜಾ ಸುದ್ದಿಪುತ್ತೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೀಡಿ ಕಾರ್ಮಿಕರ ಪ್ರತಿಭಟನೆ: ಅಧಿಕಾರಿಗಳು, ಮಾಲೀಕರು ಸ್ಥಳಕ್ಕೆ ಬರುವಂತೆ...

ಪುತ್ತೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೀಡಿ ಕಾರ್ಮಿಕರ ಪ್ರತಿಭಟನೆ: ಅಧಿಕಾರಿಗಳು, ಮಾಲೀಕರು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದ ಪ್ರತಿಭಟನಾಕಾರರು 

- Advertisement -
- Advertisement -

ಪುತ್ತೂರು : ಬೀಡಿ ಕಾರ್ಮಿಕರ ಶೋಷಣೆ ನಿಲ್ಲಿಸಬೇಕು, ಸರ್ಕಾರ ನಿಗಧಿಗೊಳಿಸಿದ ಕನಿಷ್ಠ ವೇತನ ಜಾರಿಯಾಗಬೇಕು,  ಬಾಕಿ ವೇತನ ಪಾವತಿ ಮಾಡಬೇಕು ಸೇರಿಸಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ತಾಲೂಕು ಬೀಡಿ ಕಾರ್ಮಿಕರ ಸಂಘದಿಂದ ನೆಹರುನಗರದ  ಸೌತ್ ಕೆನರಾ ಬೀಡಿ ಇಂಡಸ್ಟ್ರೀಸ್ ಎದುರು ಪ್ರತಿಭಟನೆ ನಡೆಯಿತು.

ಬೇಡಿಕೆ ಈಡೇರಿಕೆ ಕುರಿತು ಭರವಸೆ ನೀಡುವಂತೆ ಬೀಡಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮತ್ತು ಬೀಡಿ ಕಂಪೆನಿಯವರು ಸ್ಥಳಕ್ಕೆ ಬರುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದ ಘಟನೆ ಇಂದು ನಡೆಯಿತು. ತಾಲೂಕು ಬೀಡಿ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಮ್ ಭಟ್ ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಬೀಡಿ ಕೈಗಾರಿಕೆಯನ್ನು ಜಿಲ್ಲೆಯಲ್ಲಿ ಬಲಿಷ್ಟವಾಗಿ ಕಟ್ಟಿ ಬೆಳೆಸಿದ ಬೀಡಿ ಕಾರ್ಮಿಕರ ಬಗ್ಗೆ ಇಂದು ಸರ್ಕಾರಕ್ಕೂ, ಮಾಲೀಕರಿಗೂ ಕಾಳಜಿ ಇಲ್ಲವಾಗಿದೆ ಅಂದ್ರು.

ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮೂಲ ಕಾರಣವಾಗಿ ಬೆಳೆದ ಬೀಡಿ ಕೈಗಾರಿಕೆಯಲ್ಲಿ ಇಂದು ಕಾರ್ಮಿಕರ ಶೋಷಣೆ ಮಿತಿ ಮೀರುತ್ತಿವೆ. ಕನಿಷ್ಟ ವೇತನ ಕಾಯ್ದೆ ಕಾನೂನು ಇದ್ದರೂ ಅದನ್ನು ಕಂಪೆನಿಯವರು ಉಲ್ಲಂಘಿಸಿದ್ದಾರೆ ಎಂದು ಅವರು ಆರೋಪಿಸಿದರು.

- Advertisement -

Latest News

error: Content is protected !!