Thursday, June 4, 2026
Homeತಾಜಾ ಸುದ್ದಿಪ್ರಾಥಮಿಕ ಶಾಲಾ ಸಹ ಶಿಕ್ಷಕರ ಅಂತರ್ ವಿಭಾಗ ವರ್ಗಾವಣಾ ಕೌನ್ಸಿಲಿಂಗ್ ಮರು ನಿಗದಿ

ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಅಂತರ್ ವಿಭಾಗ ವರ್ಗಾವಣಾ ಕೌನ್ಸಿಲಿಂಗ್ ಮರು ನಿಗದಿ

- Advertisement -
- Advertisement -

ಬೆಂಗಳೂರು: ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಅಂತರ್ ವಿಭಾಗ‌ ಮಟ್ಟದ ವರ್ಗಾವಣಾ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಮರು‌ ನಿಗದಿಗೊಳಿಸಲಾಗಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಿಂದ ಪರಿಷ್ಕೃತ ವೇಳಾಪಟ್ಟಿ ಹೊರಡಿಸಲಾಗಿದೆ.

ವರ್ಗಾವಣಾ ಕೌನ್ಸಿಲಿಂಗ್ ಅನ್ನು ಝೂಮ್ ಸಭೆಯ ಮೂಲಕ ಕೈಗೊಳ್ಳಲಾಗುತ್ತಿದೆ. ಅರ್ಹ ಶಿಕ್ಷಕರು ಆಯಾ ಜಿಲ್ಲಾ ಉಪ ನಿರ್ದೆಶಕರ ಕಚೇರಿಯಲ್ಲಿ ಕೌನ್ಸಿಲಿಂಗ್ ಗೆ ಹಾಜರಾಗಲು ಸೂಚಿಸಲಾಗಿದೆ.

2020-21ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಯ ಕ್ರಮಗಳು ಜಾರಿಯಲ್ಲಿದ್ದ ವೇಳೆ ಕೆಲವು ಜಿ.ಪಿ.ಟಿ. ಶಿಕ್ಷಕರು ಪಿ.ಎಸ್.ಟಿ. ಶಿಕ್ಷಕರನ್ನು ಜಿ.ಪಿ.ಟಿ. ಶಿಕ್ಷಕರ ಹುದ್ದೆಗೆ ವರ್ಗಾಯಿಸಿರುವುದನ್ನು ಪ್ರಶ್ನಿಸಿ ಕೆಎಟಿ ಮೊರೆ ಹೋಗಿದ್ದರು. ಹಾಗಾಗಿ ವರ್ಗಾವಣೆ ಪ್ರಕ್ರಿಯೆಗೆ ಕೆಎಟಿ ತಡೆ ‌ನೀಡಿತ್ತು.

ನಂತರ ಮಾರ್ಚ್ 28 ರಂದು ಕೆಎಟಿ ಅಂತಿಮ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಪ್ರಕಟಿಸಲಾಗಿರುವ ಅಂತಿಮ ಆದ್ಯತಾ ಪಟ್ಟಿಯ ಪ್ರಕಾರ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಅಂತರ್ ವಿಭಾಗ ಮಟ್ಟದ ವರ್ಗಾವಣಾ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಮರು ನಿಗದಿಗೊಳಿಸಲಾಗಿದೆ.

- Advertisement -

Latest News

error: Content is protected !!