Thursday, June 4, 2026
Homeಕರಾವಳಿಉಡುಪಿಉಡುಪಿ : ತೆಂಗಿನಮರ ಬಿದ್ದು ವ್ಯಕ್ತಿ ಸಾವು

ಉಡುಪಿ : ತೆಂಗಿನಮರ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಉಡುಪಿ : ಜೆಸಿಬಿ ಮೂಲಕ ತೆರವುಗೊಳಿಸುವಾಗ ತೆಂಗಿನ ಮರ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕಾವಡಿ ಗ್ರಾಮದ ಸಸಿಹಿತ್ಲು ಎಂಬಲ್ಲಿ ನಡೆದಿದೆ. ಕಾವಡಿ ಗ್ರಾಮದ ಸಸಿಹಿತ್ಲು ನಿವಾಸಿ ರಮೇಶ್ ಮೃತ ದುರ್ದೈವಿ.

ಎ.15ರಂದು ಮಧ್ಯಾಹ್ನ ವೇಳೆ ಜೆಸಿಬಿ ಮೂಲಕ ಬೀಳುವ ಸ್ಥಿತಿಯಲ್ಲಿದ್ದ ತೆಂಗಿನ ಮರವನ್ನು ತೆರವುಗೊಳಿಸಲಾಗುತ್ತಿತ್ತು. ಆದರೆ ಜೆಸಿಬಿ ಚಾಲಕ ಯಾವುದೇ ಸೂಚನೆ ನೀಡದೇ ಒಮ್ಮೇಲೆ ಮರವನ್ನು ದೂಡಿದ ಕಾರಣ, ಮರ ರಮೇಶ ಎಂಬವರ ಮೇಲೆ ಬಿತ್ತೆನ್ನಲಾಗಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ರಮೇಶ್,ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!