Friday, June 5, 2026
Homeಕರಾವಳಿಧರ್ಮಸ್ಥಳ: ಕುಡಿತದ ನಶೆಯಲ್ಲಿ ಹಲ್ಲೆ ಮಾಡಿದ್ದ ಆರೋಪಿಯ ಬಂಧನ

ಧರ್ಮಸ್ಥಳ: ಕುಡಿತದ ನಶೆಯಲ್ಲಿ ಹಲ್ಲೆ ಮಾಡಿದ್ದ ಆರೋಪಿಯ ಬಂಧನ

- Advertisement -
- Advertisement -

ಧರ್ಮಸ್ಥಳ‌: ಕಳೆದ ಮೇ 6ರ ರಾತ್ರಿ‌ ಕುಡಿತದ ನಶೆಯಲ್ಲಿ ಸ್ನೇಹಿತನಿಗೆ ಹಲ್ಲೆ ನಡೆಸಿ, ತಲೆಮರೆಸಿಕೊಂಡಿದ್ದ ಆರೋಪಿ ಲೋಕೇಶನನ್ನು ಬಂಧಿಸುವಲ್ಲಿ ಧರ್ಮಸ್ಥಳ‌ ಪೊಲೀಸರು ಯಶಸ್ವಿಯಾಗಿದ್ದಾರೆ.

ಕುಡಿತದ ಅಮಲಿನಲ್ಲಿ ಮಾತಿಗೆ ಮಾತು ಬೆಳೆದು ಕ್ಷುಲ್ಲಕ ಕಾರಣಕ್ಕೆ ಸ್ನೇಹಿತ ಸುರೇಶನ ಮೇಲೆ ಹಲ್ಲೆ ನಡೆದಿದ ಲೋಕೇಶ್, ರಕ್ತ ನೋಡುತ್ತಿದ್ದಂತೆ ನಶೆ ಇಳಿದು ಕಾನೂನಿನ ಭಯದಿಂದ ತಲೆಮರೆಸಿಕೊಂಡಿದ್ದ.

ಈತನ ಪತ್ತೆ ಕಾರ್ಯಕ್ಕೆ ಮುಂದಾದ ಧರ್ಮಸ್ಥಳ ಪೊಲೀಸರು ಈತನಿರುವ ಜಾಗವನ್ನು ಪತ್ತೆಹಚ್ಚಿ, ಬಂಧಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪವನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

- Advertisement -

Latest News

error: Content is protected !!