Friday, June 5, 2026
Homeಕರಾವಳಿಧರ್ಮಸ್ಥಳ : ಮದ್ಯದ ಮತ್ತಿನಲ್ಲಿ ವ್ಯಕ್ತಿಯ ಕೊಲೆ ಯತ್ನ

ಧರ್ಮಸ್ಥಳ : ಮದ್ಯದ ಮತ್ತಿನಲ್ಲಿ ವ್ಯಕ್ತಿಯ ಕೊಲೆ ಯತ್ನ

- Advertisement -
- Advertisement -


ಧರ್ಮಸ್ಥಳ : ಜಗತ್ತೆಲ್ಲ ಮಾರಕ ಕೊರೊನ ಪರಿಣಾಮದಿಂದ ತತ್ತರಿಸಿ ಹೋಗಿರುವ ಸಂದರ್ಭದಲ್ಲಿ , ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬರ ಮೇಲೆ ಮಾರಕಾಯುಧಗಳಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಯತ್ನ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು,ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಧರ್ಮಸ್ಥಳ ಗ್ರಾಮದ ನಾರ್ಯ ಎಂಬಲ್ಲಿ ನಡೆದಿದೆ.


ವಯ್ಯಕ್ತಿಕ ಮನಸ್ತಾಪದ ಕಾರಣದಿಂದ ,ಅಕ್ರಮ ಮದ್ಯ ಮಾರಾಟ ದಂದೆ ಮಾಡುತ್ತಿದ್ದ ಲೋಕೇಶ್ ಎಂಬ ವ್ಯಕ್ತಿ ಸುರೇಶ್ ಎಂಬಾತನ ಮೇಲೆ ಮದ್ಯದ ಮತ್ತಿನಲ್ಲಿ ಮಾರಕಾಯುಧಗಳಿಂದ ದಾಳಿ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ . ಈ ಪೈಕಿ ಗಾಯಾಳು ಸುರೇಶ್ ಸ್ಥಿತಿ ಗಂಭೀರವಾಗಿದ್ದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಈ ಪ್ರಕರಣದ ಬಗ್ಗೆ ಆರೋಪಿ ತಲೆಮರೆಸಿಕೊಂಡಿದ್ದು, ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಅವರ ನಿರ್ದೇಶನದಂತೆ ಧರ್ಮಸ್ಥಳ ಉಪ ನಿರೀಕ್ಷಕ ಪವನ್ ನಾಯಕ್ ಅವರ ನೇತೃತ್ವದಲ್ಲಿ ತನಿಖೆ ಮುಂದುವರೆದಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ .

- Advertisement -

Latest News

error: Content is protected !!