Sunday, June 7, 2026
Homeಕರಾವಳಿಉಡುಪಿಪತಿಯ ಆಪರೇಷನ್ ಗೆ ಹಣ ಹೊಂದಿಸಲಾಗದ ಅಸಹಾಯಕತೆ: ಕಾರ್ಕಳದ ಅಜೆಕಾರಿನಲ್ಲಿ ಮಹಿಳೆ ಆತ್ಮಹತ್ಯೆ

ಪತಿಯ ಆಪರೇಷನ್ ಗೆ ಹಣ ಹೊಂದಿಸಲಾಗದ ಅಸಹಾಯಕತೆ: ಕಾರ್ಕಳದ ಅಜೆಕಾರಿನಲ್ಲಿ ಮಹಿಳೆ ಆತ್ಮಹತ್ಯೆ

- Advertisement -
- Advertisement -

ಕಾರ್ಕಳ ಪತಿಯ ಆಪರೇಷನ್ ಗೆ ಹಣ ಹೊಂದಿಸಲಾಗದೆ ಮಹಿಳೆಯೊಬ್ಬರು ನೊಂದು ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾರ್ಕಳದ ಅಜೆಕಾರಿನಲ್ಲಿ ನಡೆದಿದೆ.

ಬಾಳೆಹಿತ್ಲು ನಿವಾಸಿ ವನಿತಾ(45) ಮೃತ ದುರ್ದೈವಿ. ವನಿತಾ ಅವರ ಪತಿ ಸತೀಶ್ ಅಪಘಾತದಲ್ಲಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪತಿಗೆ ಆಪರೇಷನ್ ಮಾಡಿಸಬೇಕು ಎಂದು ವೈದ್ಯರು ಹೇಳಿದ್ದರು. ಆದರೆ ಆಪರೇಷನ್ ಗೆ ಹಣ ಹೊಂದಿಸಲಾಗದೇ ವನಿತಾ ಆತ್ಮಹತ್ಯೆಗೆ ಶರಣಾಗಿದ್ದಾರೆ.ಈ ಸಂಬಂಧ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!