Wednesday, June 3, 2026
Homeತಾಜಾ ಸುದ್ದಿ“ನಾವು ಬಿಜೆಪಿ ತೊರೆದಿದ್ದೇವೆ, ಆದರೆ ಹಿಂದುತ್ವವನ್ನಲ್ಲ”: ಉದ್ಧವ್ ಠಾಕ್ರೆ

“ನಾವು ಬಿಜೆಪಿ ತೊರೆದಿದ್ದೇವೆ, ಆದರೆ ಹಿಂದುತ್ವವನ್ನಲ್ಲ”: ಉದ್ಧವ್ ಠಾಕ್ರೆ

- Advertisement -
- Advertisement -

ಮುಂಬೈ: ನಾವು ಬಿಜೆಪಿ ತೊರೆದಿದ್ದೇವೆ ಆದರೆ ಹಿಂದುತ್ವವನ್ನಲ್ಲ. ಬಿಕ್ಕಟ್ಟು, ಸಮಸ್ಯೆ ಎದುರಾದಾಗ ಹಿಂದೂಗಳನ್ನು ರಕ್ಷಿಸಲು ಮುಂದೆ ಬರುವ ನಿಜವಾದ ಹಿಂದುತ್ವದ ಪಕ್ಷ ಶಿವಸೇನೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಸದ್ಯ ಉಪಚುನಾವಣೆಯ ಕಾವು ಹೆಚ್ಚಾಗಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಶಿವಸೇನೆ ಕಾರ್ಯಕರ್ತರು, ನಾಯಕರಿಗೆ ಉದ್ಧವ್ ಠಾಕ್ರೆ ಕರೆ ನೀಡಿದ್ದಾರೆ. ಬಿಕ್ಕಟ್ಟು, ಸಮಸ್ಯೆ ಎದುರಾದಾಗ ಹಿಂದೂಗಳನ್ನು ರಕ್ಷಿಸಲು ಮುಂದೆ ಬರುವ ನಿಜವಾದ ಹಿಂದುತ್ವದ ಪಕ್ಷ ಎಂದು ಠಾಕ್ರೆ ಹೇಳಿದ್ದಾರೆ. ಕೊಲ್ಹಾಪುರ-ಉತ್ತರ ವಿಧಾನಸಭೆಯ ಉಪಚುನಾವಣೆ ಪ್ರಚಾರಕ್ಕಾಗಿ ವರ್ಚ್ಯುಯಲ್ ಪ್ರಚಾರ ಸಭೆಯಲ್ಲಿ ಠಾಕ್ರೆ ಮಾತನಾಡಿದ್ದಾರೆ. ‘ಬಿಜೆಪಿಯೆಂದರೆ ಹಿಂದುತ್ವವಲ್ಲ, ಬಿಜೆಪಿಯಿಂದ ಶಿವಸೇನೆ ಹೊರಬಂದಿದೆಯೇ ಹೊರತು ಹಿಂದುತ್ವ ಸಿದ್ಧಾಂತದಿಂದ ಅಲ್ಲ. ಬಿಜೆಪಿಯ ಹಿಂದುತ್ವ ಅಧಿಕಾರಕ್ಕಾಗಿನ ದಾಹದ ಹಿಂದುತ್ವ, ಅಧಿಕಾರಕ್ಕಾಗಿ ಬಿಜೆಪಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ. ಅಧಿಕಾರಕ್ಕಾಗಿ ಬಿಜೆಪಿ ಯಾವ ಹಂತಕ್ಕೂ ಹೋಗುತ್ತದೆ. ಆದ್ದರಿಂದ ಜನರು ಬಿಜೆಪಿಯ ಹಿಂದುತ್ವವನ್ನು ನಂಬಬಾರದು’ ಎಂದು ಠಾಕ್ರೆ ಹೇಳಿದ್ದಾರೆ.

- Advertisement -

Latest News

error: Content is protected !!