Sunday, August 30, 2026
Homeತಾಜಾ ಸುದ್ದಿಮಂಗಳೂರು: ಹೆಡ್‌ಲೈಟ್‌ ಇಲ್ಲದೇ ಕತ್ತಲಿನಲ್ಲಿ 10 ಕಿ.ಮೀ ದೂರದವರೆಗೆ ಬಸ್‌ ಸಂಚಾರ: ಪ್ರಯಾಣಿಕ ವೀಡಿಯೋ ಮಾಡಿದ್ದನ್ನು...

ಮಂಗಳೂರು: ಹೆಡ್‌ಲೈಟ್‌ ಇಲ್ಲದೇ ಕತ್ತಲಿನಲ್ಲಿ 10 ಕಿ.ಮೀ ದೂರದವರೆಗೆ ಬಸ್‌ ಸಂಚಾರ: ಪ್ರಯಾಣಿಕ ವೀಡಿಯೋ ಮಾಡಿದ್ದನ್ನು ಗಮನಿಸಿ ಒಂದು ಲೈಟ್‌ ಸರಿಪಡಿಸಿದ ಚಾಲಕ

- Advertisement -
- Advertisement -

ಮಂಗಳೂರು: ಹೆಡ್ ಲೈಟ್ ಇಲ್ಲದೇ ಸುಮಾರು 10 ಕಿ.ಮೀ. ಗೂ ಅಧಿಕ ದೂರದವರೆಗೆ ಬಸ್ ಚಲಾಯಿಸಿ ವಾಯುವ್ಯ ಕರ್ನಾಟಕ ಸಾರಿಗೆ ಬಸ್ಸಿನ ಚಾಲಕನೋರ್ವ ಪ್ರಯಾಣಿಕರ ಜೀವದ ಜೊತ್ತೆ ಚೆಲ್ಲಾಟವಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಆಲಂಕಾರಿನಲ್ಲಿ‌ ನಡೆದಿದೆ.

ಉಪ್ಪಿನಂಗಡಿಯಿಂದ ರಾತ್ರಿ 7.15ಕ್ಕೆ ಕಡಬ ಕಡೆಗೆ ಹೊರಟ ಕಾರವಾರ – ಸುಬ್ರಹ್ಮಣ್ಯ ಎಕ್ಸ್ಪ್ರೆಸ್‌ ಬಸ್ ನಲ್ಲಿ ಮುಂಭಾಗದ ನಾಲ್ಕು ಲೈಟ್‌ ಗಳು ಕೆಟ್ಟುಹೋಗಿದೆ. ಆದ್ರೆ ಬಸ್ಸಿನ ಚಾಲಕ ತನ್ನ ಬೇಜವಾಬ್ದಾರಿಯಿಂದಾಗಿ ಕತ್ತಲೆಯಲ್ಲೇ ಬಸ್ಸನ್ನು ಚಲಾಯಿಸಿ ದುಸ್ಸಾಹಸ ಮೆರೆದಿದ್ದಾರೆ. ಬಸ್ಸಿನಲ್ಲಿ ಸುಮಾರು ಐವತ್ತರಷ್ಟು ಪ್ರಯಾಣಿಕರಿದ್ದು, ಅದರ ಪರಿವೇ ಇಲ್ಲದೆ ಚಾಲಕ ಉಪ್ಪಿನಂಗಡಿಯಿಂದ ಆಲಂಕಾರುವರೆಗೆ ಬಸ್ಸನ್ನು ಚಲಾಯಿಸಿರುವುದಾಗಿ ಪ್ರಯಾಣಿಕರು ದೂರಿದ್ದಾರೆ. ಈ ನಡುವೆ ಬಸ್ಸಿನ ಒಳಗಿನಿಂದ ಪ್ರಯಾಣಿಕರೋರ್ವರು ವೀಡಿಯೋ ಮಾಡುವುದನ್ನು ಗಮನಿಸಿದ ಚಾಲಕ ಹಾಗೂ ನಿರ್ವಾಹಕ ಆಲಂಕಾರು ತಲುಪುತ್ತಿದ್ದಂತೆ ಒಂದು ಲೈಟನ್ನು ಸರಿಪಡಿಸಿ ಬಸ್ಸನ್ನು ಚಲಾಯಿಸಿದ್ದಾರೆ.

- Advertisement -

Latest News

error: Content is protected !!