Wednesday, June 3, 2026
Homeತಾಜಾ ಸುದ್ದಿಪಣಂಬೂರಿನಲ್ಲಿ ಕಂಟೈನರ್ ಲಾರಿಗೆ ಹಠಾತ್ ಬೆಂಕಿ

ಪಣಂಬೂರಿನಲ್ಲಿ ಕಂಟೈನರ್ ಲಾರಿಗೆ ಹಠಾತ್ ಬೆಂಕಿ

- Advertisement -
- Advertisement -

ಮಂಗಳೂರು: ಲಾರಿಯೊಂದರಲ್ಲಿ ಹಠಾತ್ ಆಗಿ ಬೆಂಕಿ ಕಾಣಿಸಿಕೊಂಡ ಘಟನೆ ಮಂಗಳೂರು ನಗರದ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಎನ್‌ಎಂಪಿಟಿ ಗೇಟ್ ಬಳಿ ನಡೆದಿದೆ.


ಗೋವಾದಿಂದ ತ್ರಿಶೂರ್ ಕಡೆಗೆ ಹೋಗುತ್ತಿದ್ದ ಕಂಟೈನರ್ ವಾಹನ, ಪಣಂಬೂರು ಎನ್ ಎಂಪಿಟಿ ಮುಖ್ಯಗೇಟ್ ಬಳಿ ತಲುಪಿದಾಗ ಅದರ ಕ್ಯಾಬಿನ್ ಹಾಗೂ ಬಾಡಿಯ ಹಿಂಭಾಗದ ಮಧ್ಯಭಾಗದಲ್ಲಿ ಬೆಂಕಿ ಕಾಣಿಸಿದೆ. ತಕ್ಷಣ ಎಚ್ಚೆತ್ತುಕೊಂಡ ಚಾಲಕ ಉತ್ತರ ಪ್ರದೇಶ ಮೂಲದ ರವೀಂದ್ರ ಕುಮಾರ್ ಚೌದರಿ ಎಂಬಾತ ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಪಾರಾಗಿದ್ದಾನೆ.


ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಹೊಯ್ಸಳ ಸಿಬ್ಬಂದಿ ಎನ್ ಎಂ ಪಿ ಟಿ ಯವರ ಅಗ್ನಿ ಶಾಮಕ ವಾಹನ ತರಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಸಂದರ್ಭ ಸಾರ್ವಜನಿಕರು ಸಹಕರಿಸಿದರು.

- Advertisement -

Latest News

error: Content is protected !!