Friday, June 5, 2026
Homeಕರಾವಳಿಕೆಪಿಸಿಸಿ ಪದಾಧಿಕಾರಿಗಳ‌ ಪಟ್ಟಿ ‌ಪ್ರಕಟ : ಕರಾವಳಿಯ ಹನ್ನೊಂದು ಕಾಂಗ್ರೆಸ್ ನಾಯಕರಿಗೆ ಸ್ಥಾನ

ಕೆಪಿಸಿಸಿ ಪದಾಧಿಕಾರಿಗಳ‌ ಪಟ್ಟಿ ‌ಪ್ರಕಟ : ಕರಾವಳಿಯ ಹನ್ನೊಂದು ಕಾಂಗ್ರೆಸ್ ನಾಯಕರಿಗೆ ಸ್ಥಾನ

- Advertisement -
- Advertisement -

ಬೆಂಗಳೂರು: ಮೂರು ವರ್ಷಗಳ ಬಳಿಕ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯನ್ನು ಎಐಸಿಸಿ ಪ್ರಕಟಿಸಿದೆ. ಇಂದು ಪ್ರಕಟಿಸಿರುವ ಪಟ್ಟಿಯಲ್ಲಿ 40 ಉಪಾಧ್ಯಕ್ಷರು ಮತ್ತು ನೂರಾ ಒಂಬತ್ತು ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ.

ಕೆಪಿಸಿಸಿ ಉಪಾಧ್ಯಕ್ಷರ ಪಟ್ಟಿಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಎಂಎಲ್ಸಿ ಐವಾನ್ ಡಿಸೋಜಾ, ಎಂಎಲ್ಸಿ ಮಂಜುನಾಥ್ ಭಂಡಾರಿ, ಪಿ.ವಿ. ಮೋಹನ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಸಚಿವ ರಮಾನಾಥ ರೈ ಸೇರಿದ್ದಾರೆ.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾಗಿ ಧನಂಜಯ ಅಡ್ಪಂಗಾಯ, ಕೃಪಾ ಆಳ್ವ, ಎಂ.ಎ. ಗಪೂರ್, ಮಮತಾ ಗಟ್ಟಿ, ಮಿಥುನ್ ರೈ ನೇಮಕಗೊಂಡಿದ್ದಾರೆ.

ಮೊದಲ ಹಂತದಲ್ಲಿ ಉಪಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳನ್ನು ಮಾತ್ರ ನೇಮಕ ಮಾಡಲಾಗಿದೆ. ಈ ಪೈಕಿ ಕರಾವಳಿಯ ಹನ್ನೊಂದು ನಾಯಕರು ಸ್ಥಾನ ಪಡೆದಿದ್ದಾರೆ.

- Advertisement -

Latest News

error: Content is protected !!