Friday, June 5, 2026
Homeಕರಾವಳಿಉಳ್ಳಾಲ: ಬೈಕ್ ಹಾಗೂ ಲಾರಿ ಲಾರಿ ನಡುವೆ ಅಪಘಾತ- ಚಿತ್ರಕಲಾವಿದ ರವಿಕುಮಾರ್ ಸಾವು

ಉಳ್ಳಾಲ: ಬೈಕ್ ಹಾಗೂ ಲಾರಿ ಲಾರಿ ನಡುವೆ ಅಪಘಾತ- ಚಿತ್ರಕಲಾವಿದ ರವಿಕುಮಾರ್ ಸಾವು

- Advertisement -
- Advertisement -

ಉಳ್ಳಾಲ: ಬೈಕ್ ಹಾಗೂ ಲಾರಿ ಲಾರಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ರಾ.ಹೆ 66ರ ಎಕ್ಕೂರು ಸಮೀಪ ನಡೆದಿದೆ. ಮೃತರನ್ನು ಕೊಲ್ಯದ ಕನೀರುತೋಟ ನಿವಾಸಿ ಆರ್ಟಿಸ್ಟ್ ಆಗಿದ್ದ ರವಿಕುಮಾರ್ (55) ಎಂದು ತಿಳಿಸಲಾಗಿದೆ.

ಕೆಲಸದ ನಿಮಿತ್ತ ಕೊಲ್ಯದಿಂದ ಮಂಗಳೂರು ಕಡೆಗೆ ಬೈಕಿನಲ್ಲಿ ತೆರಳುವ ಸಂದರ್ಭ ಹಿಂಬದಿಯಿಂದ ಅತಿವೇಗ ಹಾಗೂ ಅಜಾಗರೂಕತೆ ಚಾಲನೆಯಿಂದ ಬಂದ ಲಾರಿ ಢಿಕ್ಕಿ ಹೊಡೆದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರೂ ಅದಾಗಲೇ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ.

ಸುಮಾರು 35 ವರ್ಷಗಳಿಂದ ತೈಲ ಹಾಗೂ ಪೈಂಟ್ ಕುಂಚದ ಕಲಾವಿದರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿ ಕುಮಾರ್ ಓರ್ವ ಪ್ರಾಣಿ, ಪಕ್ಷಿ ಹಾಗೂ ಪ್ರಕೃತಿ ಪ್ರಿಯರಾಗಿದ್ದರು. ಸುತ್ತಮುತ್ತದ ಪ್ರದೇಶದಲ್ಲಿ ಎಲ್ಲರಿಗೂ ಬೇಕಾದವರಾಗಿದ್ದ ರವಿಕುಮಾರ್ ಅಕಾಲಿಕ ಅಗಲುವಿಕೆಯಿಂದ ಅಪಾರ ಸ್ನೇಹಿತ ವರ್ಗಕ್ಕೆ, ಕುಟುಂಬಸ್ಥರಿಗೆ ದುಃಖವನ್ನುಂಟುಮಾಡಿದೆ.

- Advertisement -

Latest News

error: Content is protected !!