Saturday, June 6, 2026
Homeತಾಜಾ ಸುದ್ದಿಪಿಂಚಣಿ ಹಣದಲ್ಲಿ ಗಣೇಶನ ಗುಡಿ ನಿರ್ಮಿಸಿದ ರೆಹಮಾನ್; ಇಲ್ಲಿದೆ ಸಾಮರಸ್ಯದ ಕಥೆ

ಪಿಂಚಣಿ ಹಣದಲ್ಲಿ ಗಣೇಶನ ಗುಡಿ ನಿರ್ಮಿಸಿದ ರೆಹಮಾನ್; ಇಲ್ಲಿದೆ ಸಾಮರಸ್ಯದ ಕಥೆ

- Advertisement -
- Advertisement -

ಚಾಮರಾಜನನಗರ: ಇಲ್ಲಿನ ಮುಸ್ಲಿಂ ವ್ಯಕ್ತಿಯೋರ್ವ ತನ್ನ ಪಿಂಚಣಿ ಹಣದಲ್ಲಿ ಗಣೇಶನ ದೇವಾಲಯ ನಿರ್ಮಿಸಿ ಸೌಹಾರ್ಧತೆಗೆ ಸಾಕ್ಷಿಯಾಗಿದ್ದಾರೆ.


ಚಾಮರಾಜನಗರ ತಾಲೂಕಿನ ಚಿಕ್ಕಿಹೊಳೆ ಜಲಾಶಯ ಸಮೀಪ ಸುಂದರ ಗಣೇಶ ದೇವಸ್ಥಾನ ನಿರ್ಮಾಣವಾಗಿದ್ದು ರೆಹಮಾನ್ ಎಂಬಾತ ಜಲಾಶಯ ಗೇಟ್ ಕೀಪರ್ ಕೆಲಸ ಮಾಡಿಕೊಂಡಿದ್ದಾರೆ. ನಾಲ್ಕು ವರ್ಷದ ಹಿಂದೆ ಇಲ್ಲಿನ ಗಣೇಶ ಮೂರ್ತಿ ಕಳುವಾಗಿದ್ದರಿಂದ ಬೇಜಾರಾಗಿದ್ದ ಅವರು, ದೇವಸ್ಥಾನ ನಿರ್ಮಿಸಿ ಭಕ್ತಿ ಮೆರೆದಿದ್ದಾರೆ.


ಗಣೇಶನ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಅಲ್ಲದೆ ಪೂಜೆ ಸಲ್ಲಿಸಲು ಅರ್ಚಕರನ್ನೂ ನೇಮಿಸಿದ್ದಾರೆ. ಇವರ್ ಈ ಕಾರ್ಯ ಇದೀಗ ಮೆಚ್ಚುಗೆ ಗಳಿಸಿದ್ದು, ರೆಹಮಾನ್ ನಂತಹ ವ್ಯಕ್ತಿ ಈ ಸಮಾಜಕ್ಕೆ ಆದರ್ಶ ಸ್ವರೂಪ ಎಂದು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

- Advertisement -

Latest News

error: Content is protected !!