Thursday, June 4, 2026
Homeಕರಾವಳಿಉಡುಪಿಉಡುಪಿ ಶಿರ್ವ ಗ್ರಾಮ ಪಂಚಾಯತ್ ಕಚೇರಿ ಎದುರು ಹೈಡ್ರಾಮಾ :ಪ್ರತಿಭಟನೆ ವೇಳೆ ಹರಿದ ಮಾಜಿ ಸಚಿವ...

ಉಡುಪಿ ಶಿರ್ವ ಗ್ರಾಮ ಪಂಚಾಯತ್ ಕಚೇರಿ ಎದುರು ಹೈಡ್ರಾಮಾ :ಪ್ರತಿಭಟನೆ ವೇಳೆ ಹರಿದ ಮಾಜಿ ಸಚಿವ ಸೊರಕೆ ಶರ್ಟ್

- Advertisement -
- Advertisement -

ಉಡುಪಿ: ಅಕ್ರಮ ಮನೆ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಶಿರ್ವ ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆದಿದೆ.
ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯ ಮನೆ ತೆರವುಗೊಳಿಸಿದ್ದನ್ನು ಖಂಡಿಸಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.

ಪ್ರತಿಭಟನೆ ವೇಳೆ ಗ್ರಾಮ ಪಂಚಾಯತ್ ಪಿಡಿಓ ಜೊತೆ ಮಾತಿನ ಚಕಮಕಿ ನಡೆದಿದ್ದು ತಳ್ಳಾಟ ಕೂಡಾ ನಡೆದಿದೆ. ತಳ್ಳಾಟದಲ್ಲಿ ವಿನಯ ಕುಮಾರ್ ಸೊರಕೆ ಶರ್ಟ್ ಕೂಡಾ ಹರಿಯಲ್ಪಟ್ಟಿದೆ.

ಈ ವೇಳೆ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಬಿಜೆಪಿ ಕಾರ್ಯಕರ್ತರು ಬಂದಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತನ ನಡುವೆ ಮಾತಿನ ಚಕಮಕಿ ನಡೆದಿದೆ.

ಮಾಜಿ ಸಚಿವ ಸೊರಕೆ ಜೊತೆ ಬಿಜೆಪಿ ಕಾರ್ಯಕರ್ತರು ನೇರ ಸಂಘರ್ಷಕ್ಕಿಳಿದ ಕಾರಣ ಗ್ರಾಮ ಪಂಚಾಯತ್ ಕಛೇರಿ ಮುಂದೆ ಹೈಡ್ರಾಮಾ ನಡೆದುಹೋಗಿದೆ.

- Advertisement -

Latest News

error: Content is protected !!