Thursday, June 4, 2026
Homeತಾಜಾ ಸುದ್ದಿಇಂದೂ ವಾಹನ ಸವಾರರಿಗೆ ಬಿಗ್ ಶಾಕ್- 15 ದಿನಗಳಲ್ಲಿ 13ನೇ ಬಾರಿ ಪೆಟ್ರೋಲ್‌, ಡೀಸೆಲ್ ಬೆಲೆ...

ಇಂದೂ ವಾಹನ ಸವಾರರಿಗೆ ಬಿಗ್ ಶಾಕ್- 15 ದಿನಗಳಲ್ಲಿ 13ನೇ ಬಾರಿ ಪೆಟ್ರೋಲ್‌, ಡೀಸೆಲ್ ಬೆಲೆ ಏರಿಕೆ

- Advertisement -
- Advertisement -

ನವದೆಹಲಿ: ದೇಶದಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಏರಿಕೆ ಕಂಡು ಬಂದಿದೆ. ಇಂದು (ಏಪ್ರಿಲ್‌ 5,2022) ಪೆಟ್ರೋಲ್, ಡೀಸೆಲ್ ಹೆಚ್ಚಳವಾಗಿದೆ. ಕಳೆದ 15 ದಿನಗಳಲ್ಲಿ ದೇಶದಲ್ಲಿ ಪೆಟ್ರೋಲ್‌, ಡೀಸೆಲ್ ಬೆಲೆ 13ನೇ ಬಾರಿ ಹೆಚ್ಚಳವಾಗಿದ್ದು, ಲೀಟರ್‌ಗೆ 9.20 ರೂಪಾಯಿ ಏರಿಕೆ ಆಗಿದೆ.

ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ತೈಲ ಕಂಪನಿಗಳು ಏಪ್ರಿಲ್‌ 5ರಂದು ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಮಾಡಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗ ಪೆಟ್ರೋಲ್ ಬೆಲೆ 80 ಪೈಸೆ ಏರಿಕೆ ಹೊಂದಿ, ಪ್ರತಿ ಲೀಟರ್‌ಗೆ ರೂ. 104.61 ಆಗಿದೆ. ಇನ್ನು ಡಿಸೇಲ್ ಬೆಲೆಯು ಕೂಡಾ ಲೀಟರ್‌ಗೆ 80 ಪೈಸೆ ಹೆಚ್ಚಳವಾಗಿ, 95.87ಗೆ ತಲುಪಿದೆ.

ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮವಾಗಿ ಕಚ್ಚಾತೈಲ ಬೆಲೆ ದಶಕದ ಬಳಿಕ ಮೊದಲ ಬಾರಿಗೆ ಭಾರೀ ಏರಿಕೆ ಕಂಡು ಬಂದಿದೆ. ಈ ಬೆನ್ನಲ್ಲೇ ದೇಶದಲ್ಲಿ ಸುಮಾರು 137 ದಿನಗಳ ನಂತರ ಪೆಟ್ರೋಲ್‌ ಹಾಗೂ ಡೀಸೆಲ್ ದರವನ್ನು ಏರಿಕೆ ಮಾಡಲಾಗಿದೆ. ಪೆಟ್ರೋಲ್‌, ಡೀಸೆಲ್ ದರ ಕಳೆದ 15 ದಿನಗಳಲ್ಲಿ ಒಂದೆರಡು ದಿನ ಮಾತ್ರ ಸ್ಥಿರವಾಗಿದ್ದು, ಉಳಿದ ದಿನಗಳಲ್ಲಿ ಏರಿಕೆ ಕಂಡಿದೆ.

- Advertisement -

Latest News

error: Content is protected !!