Sunday, May 19, 2024
Homeತಾಜಾ ಸುದ್ದಿಮಂಗಳೂರು: ಗೂಗಲ್ ಮ್ಯಾಪ್​ನಲ್ಲಿ ಬಪ್ಪನಾಡು ಕ್ಷೇತ್ರದ ಹೆಸರು ಬದಲಾಯಿಸಿದ ಕಿಡಿಗೇಡಿಗಳು

ಮಂಗಳೂರು: ಗೂಗಲ್ ಮ್ಯಾಪ್​ನಲ್ಲಿ ಬಪ್ಪನಾಡು ಕ್ಷೇತ್ರದ ಹೆಸರು ಬದಲಾಯಿಸಿದ ಕಿಡಿಗೇಡಿಗಳು

spot_img
- Advertisement -
- Advertisement -

ಮಂಗಳೂರು: ಮುಲ್ಕಿಯ ಶ್ರೀಕ್ಷೇತ್ರ ಬಪ್ಪನಾಡು ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದ ಹೆಸರನ್ನು ಗೂಗಲ್ ಮ್ಯಾಪ್​ನಲ್ಲಿ ಕಿಡಿಗೇಡಿಗಳು ಹಝರತ್ ಬಪ್ಪ ಬ್ಯಾರಿ ದುರ್ಗಾಪರಮೇಶ್ವರಿ ಎಂದು ಬದಲಾಯಿಸಿದ ಘಟನೆ ನಡೆದಿದೆ. ಈ ಬಗ್ಗೆ ದೂರು ನೀಡಿದ ಬಳಿಕ ಹೆಸರನ್ನು ಮೊದಲಿನಂತೆ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ ಎಂದು ಸರಿಪಡಿಸಲಾಗಿದೆ.

ಗೂಗಲ್ ಮ್ಯಾಪ್​ನಲ್ಲಿ ಹೆಸರು ಬದಲಾಯಿಸಿದ ಬಗ್ಗೆ ದೇವಸ್ಥಾನದ ಆಡಳಿತ ಸಮಿತಿ ಮಂಗಳೂರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಗೂಗಲ್ ಮ್ಯಾಪ್‌ನಲ್ಲಿ ಕಿಡಿಗೇಡಿಗಳು ಸಾಮರಸ್ಯಕ್ಕೆ ಧಕ್ಕೆ ತರುವ ದುರುದ್ದೇಶದಿಂದ ಈ ಕೃತ್ಯವೆಸಗಿದ್ದಾರೆ. ಘಟನೆ ಗಮನಕ್ಕೆ ಬಂದ ತಕ್ಷಣ ದೇವಸ್ಥಾನದ ಆಡಳಿತ ಮಂಡಳಿ ಮ್ಯಾಪ್​ನಲ್ಲಿ ಮರು ನಾಮಕರಣ ಪ್ರಕ್ರಿಯೆ ನಡೆಸಿ, ಗೂಗಲ್ ರಿವ್ಯೂ ಬಳಿಕ ಹೆಸರು ಬದಲಾವಣೆಯಾಗಲಿದೆ.

ಬಪ್ಪನಾಡು ದುರ್ಗಾಪರಮೇಶ್ವರಿ ದೇವರು ಬಪ್ಪಬ್ಯಾರಿ ಎಂಬ ಮುಸ್ಲಿಂ ವ್ಯಕ್ತಿಗೆ ಒಲಿದದ್ದು ಮತ್ತು ಬಪ್ಪ ಬ್ಯಾರಿಯ ಮೂಲಕ ಈ ದೇವಸ್ಥಾನ ನಿರ್ಮಾಣವಾಗಿರುವ ಐತಿಹ್ಯವಿದೆ. ಇತ್ತೀಚಿಗೆ ಈ ದೇವಸ್ಥಾನದ ಜಾತ್ರೆಯಲ್ಲಿ ಹಿಂದೂ ಸಂಘಟನೆಗಳು ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡದೆ ವಿವಾದವೇರ್ಪಟ್ಟಿತ್ತು. ಇದೀಗ ಕಿಡಿಗೇಡಿಗಳು ಗೂಗಲ್ ಮ್ಯಾಪ್​ನಲ್ಲಿ ಹೆಸರು‌ ಬದಲಾಯಿಸಿದ್ದಾರೆ.

- Advertisement -
spot_img

Latest News

error: Content is protected !!