Saturday, October 17, 2026
Homeತಾಜಾ ಸುದ್ದಿಉಗ್ರರೆಂದು ಭಾವಿಸಿ ನಾಗರೀಕರ ಮೇಲೆ ಸೇನೆ ಗುಂಡಿನ ದಾಳಿ- ಇಬ್ಬರು ಸಾವು

ಉಗ್ರರೆಂದು ಭಾವಿಸಿ ನಾಗರೀಕರ ಮೇಲೆ ಸೇನೆ ಗುಂಡಿನ ದಾಳಿ- ಇಬ್ಬರು ಸಾವು

- Advertisement -
- Advertisement -

ಅರುಣಾಚಲ ಪ್ರದೇಶ: ಉಗ್ರರೆಂದು ತಪ್ಪಾಗಿ ಭಾವಿಸಿ ನಾಗರಿಕರ ಮೇಲೆ ಸೇನೆಯು ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ನಾಗರಿಕರು ಮೃತಪಟ್ಟಿರುವ ಘಟನೆ ಅರುಣಾಚಲ ಪ್ರದೇಶದ ತಿರಾಪ್ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ನೋಕ್ಫ್ಯಾ ವಾಂಗ್ಡಾನ್ (28) ಮತ್ತು ರಾಮ್ವಾಂಗ್ ವಾಂಗ್ಸು (23) ಎಂದು ಗುರುತಿಸಲಾಗಿದೆ.

ನದಿಯಲ್ಲಿ ಮೀನುಗಾರಿಕೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಭಯೋತ್ಪಾದಕರು ಎಂದು ಭಾವಿಸಿ ಸೇನೆಯು ಗುಂಡಿನ ದಾಳಿ ನಡೆಸಿದೆ. ಗುಂಡಿನ ದಾಳಿ ವೇಳೆ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಪರಶೀಲಿಸಿದಾಗ ಅವರು ಉಗ್ರರಲ್ಲ ಎಂಬುದು ಗೊತ್ತಾಗಿದೆ. ತಕ್ಷಣ ದಿಬ್ರುಗಢ್‌ನಲ್ಲಿರುವ ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಇಬ್ಬರು ನಾಗರಿಕರನ್ನು ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ತಪ್ಪಾದ ಗುರುತಿನ ಪ್ರಕರಣದಿಂದ ಘಟನೆ ಸಂಭವಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

- Advertisement -

Latest News

error: Content is protected !!