Sunday, May 5, 2024
Homeಕರಾವಳಿಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳಕ್ಕೆ ಅದ್ಧೂರಿ ತೆರೆ

ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳಕ್ಕೆ ಅದ್ಧೂರಿ ತೆರೆ

spot_img
- Advertisement -
- Advertisement -

ಉಪ್ಪಿನಂಗಡಿ: ಏಪ್ರಿಲ್ 2 ರಂದು ಉಪ್ಪಿನಂಗಡಿ ನೇತ್ರಾವತಿ ಕಿನಾರೆಯಲ್ಲಿ ಆರಂಭವಾದ ವಿಜಯ- ವಿಕ್ರಮ ಜೋಡುಕರೆ ಕಂಬಳಕ್ಕೆ ಇಂದು ತೆರೆ ಬಿದ್ದಿದೆ.ಕಂಬಳ ಕೂಟದಲ್ಲಿ ಒಟ್ಟು 125 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ, ಅಡ್ಡಹಲಗೆ, ಹಗ್ಗ ಹಿರಿಯ, ನೇಗಿಲು ಹಿರಿಯ, ಹಗ್ಗ ಕಿರಿಯ ಹಾಗೂ ನೇಗಿಲು ಕಿರಿಯ ವಿಭಾಗದಲ್ಲಿ ಸ್ಪರ್ಧೆ ನಡೆಯಿತು.

ಕಂಬಳದ ಫಲಿತಾಂಶ ಈ ರೀತಿಯಾಗಿದೆ.

ಕನೆಹಲಗೆ: ಈ ವಿಭಾಗದಲ್ಲಿ 4 ಜೊತೆ ಕೋಣಗಳು ಭಾಗವಹಿಸಿದ್ದು, ಪ್ರಥಮ ಬಹುಮಾನವನ್ನು ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ (ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ), ದ್ವಿತೀಯ ಬಹುಮಾನವನ್ನು ಬಾರ್ಕೂರ್ ಶಾಂತರಾಮ್ ಶೆಟ್ಟಿ (ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್) ಪಡೆದುಕೊಂಡಿದ್ದಾರೆ.

ಅಡ್ಡ ಹಲಗೆ: ಈ ವಿಭಾಗದಲ್ಲಿ 8 ಜೊತೆ ಕೋಣಗಳು ಭಾಗವಹಿಸಿದ್ದು, ಪ್ರಥಮ ಬಹುಮಾನವನ್ನು ಪೆರಿಯಾವುಗುತ್ತು ಸತೀಶ್ ಗಟ್ಟಿಯಾಳ್ (ಹಲಗೆ ಮುಟ್ಟಿದವರು: ಮುಳಿಕಾರು ಕೆವುಡೇಲು ಅಣ್ಣಿ ದೇವಾಡಿಗ), ದ್ವಿತೀಯ ಬಹುಮಾನವನ್ನು ದ್ವಿತೀಯ: ಕೆರೆಕೋಡಿಗುತ್ತು ಬೀಯಪಾದೆ ಶೇಖರ್ ಪೂಜಾರಿ “ಎ” ( ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ) ಪಡೆದುಕೊಂಡಿದ್ದಾರೆ.

ಹಗ್ಗ ಹಿರಿಯ: ಈ ವಿಭಾಗದಲ್ಲಿ 13 ಜೊತೆ ಕೋಣಗಳು ಭಾಗವಹಿಸಿದ್ದು, ಪ್ರಥಮ ಬಹುಮಾನವನ್ನು ಮಿಜಾರ್ ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ “ಎ” (ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ), ದ್ವಿತೀಯ ಬಹುಮಾನವನ್ನು ಮಾಳ ಆನಂದ ನಿಲಯ ಶೇಖರ್ ಎ ಶೆಟ್ಟಿ (ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್)ಪಡೆದುಕೊಂಡಿದ್ದಾರೆ.

ಹಗ್ಗ ಕಿರಿಯ: ಈ ವಿಭಾಗದಲ್ಲಿ 12 ಜೊತೆ ಕೋಣಗಳು ಭಾಗವಹಿಸಿದ್ದು, ಪ್ರಥಮ ಬಹುಮಾನವನ್ನು ಮೂಡಬಿದ್ರಿ ಹೊಸಬೆಟ್ಟು ಏರಿಮಾರು ಬರ್ಕೆ ಚಂದ್ರಹಾಸ ಸಾಧು ಸನಿಲ್ (ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ), ದ್ವಿತೀಯ ಬಹುಮಾನವನ್ನು ಚೊಕ್ಕಾಡಿ ಕಟಪಾಡಿ ದೈವೀಕ್ ಸಂತೋಷ್ ಶೆಟ್ಟಿ `ಎ’ (ಓಡಿಸಿದವರು: ಬೈಂದೂರು ಮಂಜುನಾಥ್ ) ಪಡೆದುಕೊಂಡಿದ್ದಾರೆ.

ನೇಗಿಲು ಹಿರಿಯ: ಈ ವಿಭಾಗದಲ್ಲಿ 23 ಜೊತೆ ಕೋಣಗಳು ಭಾಗವಹಿಸಿದ್ದು, ಪ್ರಥಮ ಬಹುಮಾನವನ್ನು ಇರುವೈಲು ಪಾನಿಲ ಬಾಡ ಪೂಜಾರಿ “ಎ” (ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ), ದ್ವಿತೀಯ ಬಹುಮಾನವನ್ನು ಇರುವೈಲು ಪಾನಿಲ ಬಾಡ ಪೂಜಾರಿ “ಬಿ’ (ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ) ಪಡೆದುಕೊಂಡಿದ್ದಾರೆ.

ನೇಗಿಲು ಕಿರಿಯ: ಈ ವಿಭಾಗದಲ್ಲಿ 65 ಜೊತೆ ಕೋಣಗಳು ಭಾಗವಹಿಸಿದ್ದು, ಪ್ರಥಮ ಬಹುಮಾನವನ್ನು ಮೊಗರುಗುತ್ತು ರಿಷಿ ಶೆಟ್ಟಿ `ಎ’ (ಓಡಿಸಿದವರು: ಕೋರಿಂಜೆ ಅರುಣ್), ದ್ವಿತೀಯ ಬಹುಮಾನವನ್ನು ನಕ್ರೆ ಮಹೋಧರ ನಿವಾಸ ಇಶಾನಿ ದಯಾನಂದ ಭಂಡಾರಿ (ಕೋಣ ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ) ಪಡೆದುಕೊಂಡಿದ್ದಾರೆ.

- Advertisement -
spot_img

Latest News

error: Content is protected !!