Friday, June 5, 2026
Homeತಾಜಾ ಸುದ್ದಿವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಸಿಎಂ ಇಬ್ರಾಹಿಂ ರಾಜೀನಾಮೆ:

ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಸಿಎಂ ಇಬ್ರಾಹಿಂ ರಾಜೀನಾಮೆ:

- Advertisement -
- Advertisement -

ಸಿ.ಎಂ.ಇಬ್ರಾಹಿಂ ಇಂದು ತಮ್ಮMLC ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ…ವಿಧಾನಸೌಧದಲ್ಲಿರುವ  ಸಭಾಪತಿಗಳ ಕೊಠಡಿಗೆ ತೆರಳಿ ಸಭಾಪತಿ ಬಸವರಾಜ್ ಹೊರಟ್ಟಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ…ಸಿ.ಎಂ ಇಬ್ರಾಹಿಂ ರಾಜೀನಾಮೆಯನ್ನ ಸಭಾಪತಿಗಳು ಅಂಗೀಕರಿಸಿದ್ದಾರೆ…ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಇಬ್ರಾಹಿಂ ಈಗ ತಮ್ಮ MLC ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ..

ಇನ್ನು ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಇಬ್ರಾಹಿಂ  ಇಂದು ನನ್ನ ರಾಜೀನಾಮೆಯನ್ನು ಸಭಾಪತಿಗಳು ಅಂಗಿಕರಿಸಿದ್ದಾರೆ. ಇಷ್ಟು ದಿನ ಕಾಂಗ್ರೆಸ್ ಕಾರ್ಯಕರ್ತರು ಜೊತೆಗಿದ್ರು. ಒಳ್ಳೊಳ್ಳೆ ಸ್ನೇಹಿತರೂ ಇದ್ರು. ಆದ್ರೆ ವಿಧಿಯಿಲ್ಲದೆ ಬಿಡಬೇಕಾಯ್ತು. ಅವರೆಲ್ಲರಿಗೂ ಧನ್ಯವಾದ ಹೇಳ್ತೀನಿ ಅಂದ್ರು…

ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಇಬ್ರಾಹಿಂ ಜೆಡಿ ಎಸ್ ಸೇರಲಿದ್ದಾರೆ ಎನ್ನುವ ಊಹಾಪೋಹಗಳು ಹರಿದಾಡುತ್ತಿದೆ. ಇಬ್ರಾಹಿಂ ಬಂದರೆ ಸ್ವಾಗತಿಸುತ್ತೇವೆ ಎಂದು ಈಗಾಗಲೇ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿದ್ದಾರೆ. ಜೆಡಿ ಎಸ್ ಕೂಡ ಪ್ರಬಲ ಮುಸ್ಲಿಂ ನಾಯಕನನ್ನು ಪಾರ್ಟಿಗೆ ಆಹ್ವಾನಿಸಲು ಉತ್ಸುಕವಾಗಿದೆ ಎನ್ನಲಾಗಿದೆ. ಈ ಮೂಲಕ ಮೈಸೂರು ಭಾಗದಲ್ಲಿ ಜೆಡಿ ಎಸ್ ಅನ್ನು ಬೆಳೆಸುವ ಯೋಜನೆಯನ್ನು ದಳಪತಿಗಳು ರೂಪಿಸಿದ್ದಾರೆ

- Advertisement -

Latest News

error: Content is protected !!