Saturday, June 6, 2026
Homeಕರಾವಳಿಸಂಪಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಟಾಸ್ಕ್ ಫೋರ್ಸ್ ಸಭೆ

ಸಂಪಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಟಾಸ್ಕ್ ಫೋರ್ಸ್ ಸಭೆ

- Advertisement -
- Advertisement -

ಅರಂತೋಡು. ಸಂಪಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಟಾಸ್ಕ್ ಫೋರ್ಸ್ ಸಭೆ ಪಂಚಾಯತ್ ಅಧ್ಯಕ್ಷರಾದ ಸುಂದರಿ ಮುಂದಡ್ಕ ಅಧ್ಯಕ್ಸತೆಯಲ್ಲಿ ನಡೆಯಿತು.
ಸಭೆಯಲ್ಲಿ ಪ್ರಮುಖವಾಗಿ ಪೇಟೆಯಲ್ಲಿ ಪ್ರಮುಖವಾಗಿ ಮದ್ಯಾಹ್ನ 2 ಗಂಟೆ ವರೆಗೆ ಅಂಗಡಿ ತೆರೆಯಲು ನಿರ್ಧರಿಸಲಾಯಿತು. ಈ ಕುರಿತು ವರ್ತಕರ ಸಹಕಾರ ಪಡೆಯಲು ತೀರ್ಮಾನಿಸಲಾಯಿತು.

ಪ್ರತಿಯೊಂದು ಕಾಲನಿಯಲ್ಲಿ ಸೊಳ್ಳೆ ಉತ್ಪತಿಯಗದಂತೆ ಪಂಚಾಯತ್ ಮೂಲಕ ಜನರಲ್ಲಿ ಜಾಗ್ರತಿ ಮೂಡಿಸಬೇಕೆಂದು ಸಭೆಯಲ್ಲಿ ಎಲ್ಲ ಸದಸ್ಯರಿಗೆ ಜವಾಬ್ದಾರಿ ನೀಡಲಾಯಿತು.

ಈ ಸಭೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚನಿಯ ಕಲ್ತಡ್ಕ, ಉಪಾಧ್ಯಕ್ಷ ಸುಭದಾ ರೈ, ತಾಲೂಕು ಪಂಚಾಯತ್ ಸದಸ್ಯರಾದ ಪುಷ್ಪ ಮೇದಪ್ಪ, ಪಂಚಾಯತ್ ಉಪಾಧ್ಯಕ್ಷ ಮೋಹಿನಿ ಫೇಲ್ತಡ್ಕ, ಸದಸ್ಯರಾದ ಹಮೀದ್ ಜಿ. ಕೆ, ಲೂಕಸ್.ಟಿ.ಐ. ಆಶಾ, ಲತೀಶ ಡಿ ಸೋಜಾ, ಕುಸುಮ, ಷಣ್ಮುಗಂ ನಾಗೇಶ್ ವರ್ತಕರ ಸಂಘದ ಚಕ್ರಪಾಣಿ, ರಝಕ್ ಬಿ ಅಶ್ರಫ್, ಪಿಡಿಒ ನಾಗರಾಜ್ ಮತ್ತು ಕಾರ್ಯದರ್ಶಿ ವಿದ್ಯಾದಾರ ಉಪಸ್ಥಿತರಿದ್ದರು

- Advertisement -

Latest News

error: Content is protected !!