Thursday, June 4, 2026
Homeಕರಾವಳಿಉಡುಪಿಸಲಾಂ ಮಂಗಳಾರತಿ ವಿವಾದ - ಕೊಲ್ಲೂರು ದೇವಸ್ಥಾನದ ಅರ್ಚಕರಿಂದ ಸ್ಪಷ್ಟನೆ

ಸಲಾಂ ಮಂಗಳಾರತಿ ವಿವಾದ – ಕೊಲ್ಲೂರು ದೇವಸ್ಥಾನದ ಅರ್ಚಕರಿಂದ ಸ್ಪಷ್ಟನೆ

- Advertisement -
- Advertisement -

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ದೇವಿಗೆ ಸಲ್ಲಿಸುವ ಪ್ರದೋಷ ಪೂಜೆ ಅಥವಾ ಸಲಾಂ ಮಂಗಳಾರತಿ ಕುರಿತು ಕೊಲ್ಲೂರು ದೇವಸ್ಥಾನದ ಅರ್ಚಕ ಕೆವಿ ಶ್ರೀಧರ ಅಡಿಗ ಸ್ಪಷ್ಟನೆ ನೀಡಿದ್ದಾರೆ.

ಅಡಿಗ ಅವರು ತಮ್ಮ ಹೇಳಿಕೆಯಲ್ಲಿ, ”ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ಪ್ರದೋಷ ಪೂಜೆ ನಡೆಯುತ್ತದೆ. ಇದು ಬಹಳ ಅರ್ಥಪೂರ್ಣವಾದ ಪೂಜೆ. ಪ್ರದೋಷ ಕಾಲ ಬಹಳ ಮಹತ್ವದ್ದು. ಪ್ರದೋಷಕಾಲದಲ್ಲಿ ಎಲ್ಲ ದೇವ-ದೇವತೆಗಳು ಇರುತ್ತಾರೆ ಎಂಬ ಪ್ರತೀತಿ ಇದೆ. ಹಾಗಾಗಿಯೇ ಆ ಸಮಯದಲ್ಲಿ ನಾವು ದೇವಿಗೆ ಪೂಜೆ ಸಲ್ಲಿಸುತ್ತೇವೆ. ನಾವು ರಾಗೋಪಚಾರ ಮತ್ತು ದೀಪಾರಾಧನೆಯನ್ನು ಸಹ ಭವ್ಯವಾದ ರೀತಿಯಲ್ಲಿ ಮಾಡುತ್ತೇವೆ ಎಂದರು.

ಕರುಣಾ ಕರುಣಿಕೆ ಪ್ರಕಾರ ರಾಜ ಟಿಪ್ಪು ಈ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಪ್ರದೋಷ ಪೂಜೆ ವೇಳೆ ಸಲಾಂ ಹೇಳಿದ್ದರು. ಹಾಗಾಗಿ ಅದೊಂದು ಸಂಪ್ರದಾಯವಾಯಿತು. ಆದರೆ ಈ ನಂಬಿಕೆಗೆ ಯಾವುದೇ ದಾಖಲೆಗಳಿಲ್ಲ. ಆದರೆ ಪ್ರದೋಷ ಪೂಜೆ ಅಥವಾ ಪ್ರದೋಷ ಮಂಗಳಾರತಿ ಎಂದು ಕರೆಯಲ್ಪಡುವ ಪೂಜೆ ತನ್ನದೇ ಆದ ಧಾರ್ಮಿಕ ಮಹತ್ವವನ್ನು ಹೊಂದಿದೆ.

ಆರಂಭದ ದಿನಗಳಿಂದ ಇಲ್ಲಿಯವರೆಗೆ ಇದನ್ನು ಅನುಸರಿಸಲಾಗುತ್ತಿದೆ. ಪೂಜೆಯ ಸಮಯದಲ್ಲಿ ದೇಶದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಈ ಪೂಜೆಯಲ್ಲಿ ಟಿಪ್ಪು ಭಾಗವಹಿಸಿದ್ದ ಎನ್ನಲಾಗಿದೆ. ಆದುದರಿಂದ ಪೂಜೆಗೆ ಅವನ ಹೆಸರೇ ಬಂದಿರಬಹುದು.” ಎಂದಿದ್ದಾರೆ.

- Advertisement -

Latest News

error: Content is protected !!