Thursday, June 4, 2026
Homeಕರಾವಳಿಮಂಗಳೂರಿನಲ್ಲಿ ಬಾವಿಗೆ ಬಿದ್ದ ಕಡವೆಯ ರಕ್ಷಣೆ

ಮಂಗಳೂರಿನಲ್ಲಿ ಬಾವಿಗೆ ಬಿದ್ದ ಕಡವೆಯ ರಕ್ಷಣೆ

- Advertisement -
- Advertisement -

ಮಂಗಳೂರು: ಇಲ್ಲಿನ ಕಿನ್ಯ ಗ್ರಾಮದ ಉಕ್ಕುಡ ಎಂಬಲ್ಲಿ ಮಸೀದಿಯ ಬಾವಿಗೆ ಬಿದ್ದ ಕಡವೆಯೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ರಕ್ಷಿಸಿದ್ದಾರೆ.

ಕಿನ್ಯಾದಲ್ಲಿ ಆಕಸ್ಮಿಕವಾಗಿ ಕಡವೆಯೊಂದು ಬಾವಿಗೆ ಬಿದ್ದು, ಜೀವ ರಕ್ಷಣೆಗಾಗಿ ಒದ್ದಾಡುತ್ತಿತ್ತು. ಇದನ್ನು ಸ್ಥಳೀಯರು ಗಮನಿಸಿ ಪಾಂಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಡವೆಯನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಬಾವಿಗೆ ಬಿದ್ದ ರಭಸಕ್ಕೆ ಕಡವೆಯ ಬೆನ್ನು ಹಾಗೂ ಕಾಲಿಗೆ ಗಾಯವಾಗಿತ್ತು.

ಸದ್ಯ ಕಡವೆಯನ್ನು ಅರಣ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸಿ, ಅರಣ್ಯ ಇಲಾಖೆ ಪಶುಚಿಕಿತ್ಸಾಲಯದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕಾಡಿಗೆ ಬಿಡಲಾಗಿದೆ.

- Advertisement -

Latest News

error: Content is protected !!