Thursday, May 16, 2024
Homeಕರಾವಳಿಉಡುಪಿಕರಾವಳಿ ಕಡಲ ತೀರದಲ್ಲಿ ಮತ್ತೆ ನೀಲಿ ಅಲೆಗಳು

ಕರಾವಳಿ ಕಡಲ ತೀರದಲ್ಲಿ ಮತ್ತೆ ನೀಲಿ ಅಲೆಗಳು

spot_img
- Advertisement -
- Advertisement -

ಕುಂದಾಪುರ: ಮತ್ತೆ ಕುಂದಾಪುರ ಕಡಲ ತೀರದಲ್ಲಿ ನೀಲಿ ಅಲೆಗಳು ಕಾಣಿಸಿಕೊಂಡಿದ್ದಾವೆ. ರಾತ್ರಿ ಕೋಡಿ ಸಮುದ್ರ ತೀರಕ್ಕೆ ನೀಲಿ ಅಲೆಗಳು ಅಪ್ಪಳಿಸಿದೆ. ಸಮುದ್ರದ ಬಣ್ಣಗಳನ್ನು ನೋಡುವ ಕುತೂಹಲ ಹೊಂದಿರುವ ಜನರು ಸಮುದ್ರ ತೀರಕ್ಕೆ ಧಾವಿಸುತ್ತಿದ್ದಾರೆ.

2020ರಲ್ಲಿ ಕೋಡಿ, ಗಂಗೊಳ್ಳಿ, ಬೀಜಾಡಿ ಭಾಗದಲ್ಲಿ ಇಂತಹುದೇ ಘಟನೆ ನಡೆದಿತ್ತು. ಗಂಗೊಳ್ಳಿಯ ಮಡಿ ದಡದಲ್ಲಿ ಹಸಿರು ಅಲೆಗಳು ಅಪ್ಪಳಿಸಿರುವುದು ಜನರಲ್ಲಿ ಕುತೂಹಲ ಮೂಡಿಸಿತ್ತು.

ಕೋಡಿ-ಬೀಜಾಡಿ ನಡುವಿನ ಸಮುದ್ರದಲ್ಲಿ ಎರಡು ವರ್ಷಗಳ ನಂತರ ಈ ಬಾರಿ ನೀಲಿ ಅಲೆಗಳು ಕಾಣಿಸಿಕೊಂಡಿವೆ. ಕರಾವಳಿ ಕರ್ನಾಟಕದ ಅಲೆಗಳು ವಿವಿಧ ಬಣ್ಣಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಕುತೂಹಲ ಮೂಡಿಸುತ್ತಿದೆ. 2020 ರ ನಂತರ, ನೀಲಿ, ಹಸಿರು ಮತ್ತು ಬೂದು ಅಲೆಗಳು ಸ್ಥಳೀಯರಿಗೆ ಕಾಣಿಸಿಕೊಂಡಿದ್ದವು.

ಸಮುದ್ರಕ್ಕೆ ಸೇರುವ ಬೃಹತ್ ತ್ಯಾಜ್ಯದಿಂದ ಹೀಗಾಗುತ್ತಿದೆಯೇ ಅಥವಾ ಬೇರೆ ಕಾರಣಗಳಿವೆಯೇ ಎಂದು ತಿಳಿಯಲು ಜನರು ವೈಜ್ಞಾನಿಕ ಅಧ್ಯಯನಕ್ಕೆ ಮನವಿ ಮಾಡಿದ್ದಾರೆ.

ಮಂಗಳೂರಿನ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಗಣೇಶ್ ಮಾತನಾಡಿ, ನೀರಿನಲ್ಲಿ ಕರಗಿದ ಪೌಷ್ಟಿಕಾಂಶದ ಸಾಂದ್ರತೆಯ ಆಧಾರದ ಮೇಲೆ ಸಮುದ್ರವು ಬಣ್ಣಗಳನ್ನು ಪಡೆಯುತ್ತದೆ. ಮೆಗ್ನೀಸಿಯಮ್, ಕ್ಯಾಲ್ಸಿಯಂ, ಟಿನ್, ಪೊಟ್ಯಾಸಿಯಮ್, ಕ್ರೋಮಿಯಂ, ಸೆಲೆನಿಯಮ್ ಇವುಗಳಿಂದ ಈ ರೀತಿಯ ಬಣ್ಣಗಳು ಗೋಚರಿಸುತ್ತವೆ ಎಂದರು.

- Advertisement -
spot_img

Latest News

error: Content is protected !!