Saturday, June 6, 2026
Homeಕರಾವಳಿಸುಳ್ಯದಲ್ಲಿ  ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ನಿಗೂಢ ನಾಪತ್ತೆ

ಸುಳ್ಯದಲ್ಲಿ  ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ನಿಗೂಢ ನಾಪತ್ತೆ

- Advertisement -
- Advertisement -

ಸುಳ್ಯ; ಕೆ.ವಿ.ಜಿ.ಆಯುರ್ವೇದ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ನಾಪತ್ತೆಯಾಗಿದ್ದಾಳೆ.

ದ್ವಿತೀಯ ಬಿ.ಎ.ಎಂ.ಎಸ್ ವಿದ್ಯಾರ್ಥಿನಿ ಮದೀಹಾ (20) ನಾಪತ್ತೆಯಾದ ವಿದ್ಯಾರ್ಥಿನಿ.

ಉತ್ತರ ಪ್ರದೇಶದ ತೋಲಾ ಸಗರಿ ಗ್ರಾಮದ ನಿವಾಸಿಯಾಗಿರುವ ಮದೀಹಾ ಮಾ.20ರಂದು ರಾತ್ರಿ ನಾಪತ್ತೆಯಾಗಿರುವುದು ತಿಳಿದು ಬಂದಿದೆ.

ಮದೀಹಾ ಸಹೋದರ ಇದೇ ಕಾಲೇಜಿನಲ್ಲಿ ಮೂರನೇ ವರ್ಷದ ಬಿ.ಎ.ಎಂ.ಎಸ್ ವ್ಯಾಸಂಗ ಮಾಡುತ್ತಿದ್ದಾನೆ. ಆತನಿಗೆ ಸಹೋದರಿ ಬಗ್ಗೆ‌ ಸುಳಿವು ಸಿಕ್ಕಿಲ್ಲ. ಬಳಿಕ ಸಿಸಿಟಿವಿಯಲ್ಲಿ ಪರಿಶೀಲಿಸಿದಾಗ ಮಾ. 20 ರಂದು ಅಪರಾಹ್ನ 2.30ರ ವೇಳೆ ಹಾಸ್ಟೆಲ್‍ನಿಂದ ಬ್ಯಾಗ್ ಹಿಡಿದುಕೊಂಡು ಮದೀಹಾ ಹೋಗುತ್ತಿರುವುದು ಕಂಡು ಬಂದಿದೆ.‌
ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!