Thursday, June 4, 2026
Homeಕರಾವಳಿಉಡುಪಿಮಲ್ಪೆ: ಗಾಂಜಾ ಮಾರಾಟಕ್ಕೆ ಯತ್ನ, ಓರ್ವ ವಶಕ್ಕೆ

ಮಲ್ಪೆ: ಗಾಂಜಾ ಮಾರಾಟಕ್ಕೆ ಯತ್ನ, ಓರ್ವ ವಶಕ್ಕೆ

- Advertisement -
- Advertisement -

ಮಲ್ಪೆ : ಅಬಕಾರಿ ಇಲಾಖೆಯ ಅಧಿಕಾರಿಗಳು ಬಂದರಿನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯೊಬ್ಬನ್ನು ಬಂಧಿಸಿ ಆತನಿಂದ 700 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಲ್ಪೆ ಬಂದರಿನ ಮಂಜುಗಡ್ಡೆ ಖಾಲಿ ಮಾಡುವ ಸ್ಥಳಕ್ಕೆ ದಾಳಿ ಮಾಡಿ ಅಲ್ಲೇ ನಿಲ್ಲಿಸಲಾಗಿದ್ದ ವಾಹನವೊಂದನ್ನು ಪರಿಶೀಲನೆ ಸಡೆಸಿದಾಗ ವಾಹನದಲ್ಲಿ 700 ಗ್ರಾಂ ಗಾಂಜಾ ಪತ್ತೆಯಾಗಿದೆ.

ಅಬಕಾರಿ ಅಧಿಕಾರಿಗಳು ಸದ್ಯ ಪ್ರಕರಣದ ಆರೋಪಿ ವಾಹನದ ಮಾಲೀಕನನ್ನು ಬಂಧಿಸಿದ್ದು , ಪತ್ತೆಯಾದ ಗಾಂಜಾ ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ .

ಮಲ್ಪೆ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!