Thursday, June 4, 2026
Homeತಾಜಾ ಸುದ್ದಿ15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಮಾರ್ಚ್ 21 ರಂದು ನೇಮಕಾತಿ ಅಧಿಸೂಚನೆ

15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಮಾರ್ಚ್ 21 ರಂದು ನೇಮಕಾತಿ ಅಧಿಸೂಚನೆ

- Advertisement -
- Advertisement -

ಬೆಂಗಳೂರು: 6 ರಿಂದ 8ನೇ ತರಗತಿಯ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ. 15000 ಶಿಕ್ಷಕರ ಹುದ್ದೆಗಳ ಭರ್ತಿ ಮಾಡಿಕೊಳ್ಳುವ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಇಂದು ಬೆಂಗಳೂರಿನಲ್ಲಿ ಸುದ್ದಿ ಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ‌.

15000 ಶಿಕ್ಷಕರ ಪೈಕಿ 5000 ನೇಮಕಾತಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಾಗಿದೆ. ಮಾರ್ಚ್ ಇಪ್ಪತ್ತೊಂದರಂದು ನೇಮಕಾತಿ ಅಧಿಸೂಚನೆ ಹೊರಬೀಳಲಿದೆ. ಆನ್ ಲೈನ್ ಅರ್ಜಿ ಸಲ್ಲಿಕೆಗೆ ಮಾರ್ಚ್ 23 ಕ್ಕೆ ಆರಂಭವಾಗಿ ಎಪ್ರಿಲ್ 22 ಕ್ಕೆ ಕೊನೆ ದಿನವಾಗಿದೆ.

ಮೇ 21 ಮತ್ತು 22 ರಂದು ಪರೀಕ್ಷೆ ನಡೆಯಲಿದ್ದು, 400 ಅಂಕಗಳಿಗೆ ಪರೀಕ್ಷೆ ನಿಗದಿಯಾಗಿದೆ. ಜನರಲ್ ನಾಲೆಡ್ಜ್ 150 ಅಂಕ, ವಿಷಯವಾರು 150 ಅಂಕ ಮತ್ತು ಯಾವ ಭಾಷೆಗೆ ಬೋಧನೆ ಮಾಡುತ್ತಾರೋ ಆ ವಿಷಯದ ಬಗ್ಗೆ 100 ಅಂಕಗಳನ್ನು ನಿಗದಿಪಡಿಸಲಾಗಿದೆ.

ಈ ಬಾರಿಯ ನೇಮಕಾತಿಯಲ್ಲಿ ಮಂಗಳ ಮುಖಿಯರಿಗೂ ಶೇಕಡಾ.1 ರಷ್ಟು ಅವಕಾಶ ನೀಡಲಾಗಿದ್ದು, ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಶಿಕ್ಷಣ ಇಲಾಖೆಯೇ ನಡೆಸಲಿದೆ.

- Advertisement -

Latest News

error: Content is protected !!