Friday, June 5, 2026
Homeಕರಾವಳಿಉಡುಪಿಹಿರಿಯಡ್ಕ: ಹಣದ ವಿಚಾರಕ್ಕೆ ವ್ಯಕ್ತಿಯ ಮೇಲೆ ಏಕಾಏಕಿ ಹಲ್ಲೆ !

ಹಿರಿಯಡ್ಕ: ಹಣದ ವಿಚಾರಕ್ಕೆ ವ್ಯಕ್ತಿಯ ಮೇಲೆ ಏಕಾಏಕಿ ಹಲ್ಲೆ !

- Advertisement -
- Advertisement -

ಹಿರಿಯಡ್ಕ: ಕೊಟ್ಟ ಹಣವನ್ನು ವಾಪಸ್ಸು ಕೇಳಿ ಏಕಾಏಕಿ ವ್ಯಕ್ತಿಯ ಮೇಲೆ ಹಲ್ಲೆ ಮಾಡಲಾಗಿದೆ.

ಪ್ರಶಾಂತ ಹೆಗ್ಡೆ ಅವರು ತಮ್ಮ ಸ್ನೇಹಿತ ಪ್ರವೀಣ ಶೆಟ್ಟಿಯವರೊಂದಿಗೆ ಸ್ನೇಹಿತನ ಸಂಬಂಧಿಕರ ಕಾರ್ಯಕ್ರಮಕ್ಕೆ ಪೆರ್ಡೂರಿನ ಕಲ್ಯಾಣ ಮಂಟಪಕ್ಕೆ ಹೋಗುತ್ತಿದ್ದರು . ಈ ವೇಳೆ ದಿನೇಶ್ ಹೆಗ್ಡೆಯವರು ಇವರ ಕಾರನ್ನು ಅಡ್ಡ ಹಾಕಿ ನನಗೆ ಕೊಡಬೇಕಾದ 50,000 ರೂಪಾಯಿಯನ್ನು ಯಾವಾಗ ನೀಡುತ್ತೀಯ ಎಂದು ಕೇಳಿ ಅವಾಚ್ಯ ಶಬ್ದಗಳಿಂದ ಬೈದು ಏಕಾಏಕಿ ಹಲ್ಲೆ ಮಾಡಿದ್ದಾರೆ. ಇದೀಗ ಪ್ರಶಾಂತ ಹೆಗ್ಡೆ ಅವರು ದಿನೇಶ್ ಹೆಗ್ಡೆ ಎಂಬವರ ವಿರುದ್ಧ ದೂರು ನೀಡಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -

Latest News

error: Content is protected !!