- Advertisement -
![]()
- Advertisement -
ಕಾರವಾರ: ಅಕ್ರಮವಾಗಿ ದಾಸ್ತಾನು ಇರಿಸಲ್ಪಟ್ಟಿದ್ದ ಗೋವಾ ಮದ್ಯ ಜಪ್ತಿ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಐಸ್ ಫ್ಯಾಕ್ಟರಿ ಚೆಂಡಿಯಾ ಗ್ರಾಮದಲ್ಲಿ ಜಪ್ತಿ ಮಾಡಲಾಗಿದೆ.
ಸುನಿಲ್ ಲಕ್ಷ್ಮಣ ಪಡ್ತಿ ಆಮದಳ್ಳಿ ಎಂಬವರ ಮನೆಯಲ್ಲಿ ಅಕ್ರಮವಾಗಿ ಗೋವಾ ಮದ್ಯ ದಾಸ್ತಾನು ಇಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕ ಸುವರ್ಣ ಬಿ. ನಾಯ್ಕ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ.
ದಾಳಿಯಲ್ಲಿ 369,360 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದ್ದು, ಗೋವಾ ಪೆನ್ನಿ 81,000 ಲೀಟರ್ ಮತ್ತು ಗೋವಾ ಬೀಯರ್ 72,000 ಲೀಟರ್ ಜಪ್ತಿ ಮಾಡಲಾಗಿದೆ. ಅಂದಾಜು 2, 44,800 ರೂ ನಷ್ಟು ಮೌಲ್ಯದ ಮದ್ಯ ಜಪ್ತಿ ಆಗಿದ್ದು, ಪ್ರಕರಣದ ಪ್ರಥಮ ವರ್ತಮಾನ ವರದಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
- Advertisement -


