Friday, May 3, 2024
Homeಕರಾವಳಿಉಡುಪಿಬೆಳ್ತಂಗಡಿ ದೇವಸ್ಥಾನದಲ್ಲಿ ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ಮದುವೆ: ವಿವಾಹದ ಬಗ್ಗೆ ವಕೀಲ...

ಬೆಳ್ತಂಗಡಿ ದೇವಸ್ಥಾನದಲ್ಲಿ ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ಮದುವೆ: ವಿವಾಹದ ಬಗ್ಗೆ ವಕೀಲ ವಿಶ್ವರಾಜ್ ಹಾಗೂ ಕುಟುಂಬದವರಿಂದ ಸ್ಪಷ್ಟನೆ

spot_img
- Advertisement -
- Advertisement -

ಬೆಳ್ತಂಗಡಿ : ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ಮದುವೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕುತ್ರೊಟ್ಟು ಶ್ರೀ ಸತ್ಯನಾರಾಯಣ ದೇವಸ್ಥಾನದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕುತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ  ದಿನಾಂಕ 21-02-2022 ರಂದು ಉಡುಪಿ‌ ಜಿಲ್ಲೆಯ ಬೈಂದೂರು ನಾವೂಂದ ಗ್ರಾಮದ ಕಂತಿಹೊಂಡದ ಅರೆಹೊಳೆ ಎಂಬಲ್ಲಿಯ ಖಾದರ್ ಎಂಬವರ ಮಗನಾದ ಸಫ್ವಾನ್ @ ಶರತ್(26) ಎಂಬ ಯುವಕ ಅದೇ ಗ್ರಾಮದ ನಾಗರಾಜ್ ಎಂಬವರ ಪುತ್ರಿ ಸುಶ್ಮಿತಾ ಎನ್.ಕೆ(25) ಜೊತೆ ಎರಡು ಕುಟುಂಬದ ಒಪ್ಪಿಗೆ ಮೇರೆಗೆ ಹಿಂದೂ ಸಂಪ್ರದಾಯದಂತೆ ಮದುವೆ ಅಗಿದ್ದಾರೆ.

ಈ ವಿಚಾರದ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಊಹಾಪೋಹಗಳೊಂದಿಗೆ ಹರಿದಾಡುತ್ತಿದ್ದು ಈ ಬಗ್ಗೆ ಯುವತಿಯ ಸಂಬಂಧಿ ಹಾಗೂ ವಕೀಲರಾಗಿರುವ ವಿಶ್ವರಾಜ್ ಹಾಗೂ ಮದುವೆಯಾದ ಯುವಕ & ಯುವತಿ ಸ್ಪಷ್ಟನೆ ನೀಡಿದ್ದಾರೆ.

ಘಟನೆ ವಿವರ: ಉಡುಪಿ ಜಿಲ್ಲೆಯ ಬೈಂದೂರು ಗ್ರಾಮದ ಕಂತಿಹೊಂಡದ ಅರೆಹೊಳೆಯವರಾದ ಇಬ್ಬರು ಕೂಡ ಅಕ್ಕಪಕ್ಕದವರಾಗಿದ್ದು ಸಣ್ಣ ವಯಸ್ಸಿನಿಂದ ಪರಸ್ಪರ ಪ್ರೀತಿಸುತ್ತಿದ್ದು ಯುವತಿ ತಂದೆ ಯುವಕನಿಗೆ ವಾಹನ ನೀಡಿ ವ್ಯವಹಾರ ಮಾಡಿಸಿದ್ದು ಯುವತಿ ಬ್ಯಾಂಕ್ ನಲ್ಲಿ ಉದ್ಯೋಗ ಮಾಡುತ್ತಿದ್ದು ಎರಡು ಮನೆಯವರ ಒಪ್ಪಿಗೆ ಮೇರೆಗೆ ಉಡುಪಿ ಜಿಲ್ಲೆಯ ವಕೀಲರಾದ ಹಾಗೂ ಸಂಭಂದಿ ವಿಶ್ವರಾಜ್ ಸಮ್ಮುಖದಲ್ಲಿ ಬೆಳ್ತಂಗಡಿ ಶ್ರೀ ಸತ್ಯನಾರಾಯಣ ದೇವಸ್ಥಾನದಲ್ಲಿ ಮದುವೆಯಾಗಿದ್ದು ಕಾನೂನು ಪ್ರಕಾರ ಎಲ್ಲಾ ದಾಖಲೆ ರೆಡಿ ಮಾಡಿದ್ದೇವೆ. ಶನಿವಾರದಂದು ಬೆಳ್ತಂಗಡಿ ಸಬ್ ರಿಜಿಸ್ಟರ್ ಕಛೇರಿಯಲ್ಲಿ ಮದುವೆ ರಿಜಿಸ್ಟರ್ ಮಾಡುತ್ತಿದ್ದೇವೆ. ನಮಗೆ ಯಾವುದೇ ರೀತಿಯ ಹಿಂದೂ & ಮುಸ್ಲಿಂ ಸಮುದಾಯದಿಂದ ತೊಂದರೆ ಇಲ್ಲದೆ ಒಳ್ಳೆಯ ಜೀವನ ನಡೆಸುತ್ತೇವೆ. ನಮಗೆ ಯಾವುದೇ ರೀತಿಯಲ್ಲೂ ತೊಂದರೆ ಉಂಟುಮಾಡಬೇಡಿ ಎಂದು ಸ್ಪಷ್ಟನೆ ನೀಡುವ ಮೂಲಕ ಗೊಂದಲವನ್ನು ಬಗೆಹರಿಸಿದ್ದಾರೆ.

ಹಿಂದೂ ಜಾಗರಣಾ ವೇದಿಕೆಯಿಂದ ಬೆಳ್ತಂಗಡಿ ಠಾಣೆಗೆ ದೂರು : ಇನ್ನೂ ಘಟನೆ ಬಗ್ಗೆ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಮನೋಜ್ ಕುಮಾರ್ ಕುಂಜರ್ಪ ಮತ್ತಿತರರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹೋಗಿ “ಪ್ರಸ್ತುತ ಹಿಜಾಬ್
ವಿಚಾರದಲ್ಲಿ ಪ್ರಕ್ಷುಬ್ದ ವಾತಾವರಣ‌ ಇದೆ. ಈ ಸಂದರ್ಭದಲ್ಲಿ ದೂರದ ಅನ್ಯಕೋಮಿನ ಜೋಡಿಗಳ ಪೂರ್ವಪರವನ್ನು ವಿಚಾರಿಸದೆ ಸಂದ್ರಿ ದೇವಾಲಯದ ಅರ್ಚಕರು ವಿವಾಹವನ್ನು ಮಾಡುವ‌ ಮೂಲಕ ಶಾಂತಿಯಿಂದ ಇರುವ ಬೆಳ್ತಂಗಡಿಯಲ್ಲಿ ಸಾಮರಸ್ಯ ಕದಡಿ ಅಶಾಂತಿಯನ್ನು ಸೃಷ್ಟಿಸುವ ಹುನ್ನಾರ ನಡೆಸಿರುತ್ತಾರೆ” ಎಂದು ಪಿಎಸ್ಐ ನಂದಕುಮಾರ್ ಇವರಿಗೆ ದೂರು ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗುತ್ತಿರುವ ಯುವಕ & ಯುವತಿಯ ದಾಖಲೆಗಳು : ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಯುವಕ ಹಾಗೂ ಯುವತಿಯ ಮದುವೆ ಅಗಿರುವ ದಾಖಲೆ, ಆಧಾರ್ ಕಾರ್ಡ್ ಮತ್ತು ಕೆಲವು  ದಾಖಲೆಗಳನ್ನು‌ ಕಿಡಿಗೇಡಿಗಳು ವೈರಲ್ ಮಾಡುತ್ತಿದ್ದು ಈ ವಿಚಾರಗಳು ಯುವಕ & ಯುವತಿಗೆ ತಿಳಿದಿದ್ದು ಈ ಬಗ್ಗೆ  ವಕೀಲರ ಮೂಲಕ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ಶನಿವಾರ ಮಾಧ್ಯಮಗಳಿಗೆ ಮಾಹಿತಿ ನೀಡುವೆ : ಶನಿವಾರ ಬಂದು ರಿಜಿಸ್ಟರ್ ಮಾಡಿದ ಬಳಿಕ  ಮಾಧ್ಯಮಗಳಿಗೆ ವಕೀಲ ಹಾಗೂ ಸಂಬಂಧಿಯಾಗಿರುವ ವಿಶ್ವರಾಜ್ ಎಲ್ಲಾ ವಿಚಾರ ತಿಳಿಸುವುದಾಗಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!