Sunday, June 7, 2026
Homeಅಪರಾಧಬೆಳ್ತಂಗಡಿ: ಬೆಳ್ತಂಗಡಿ ಮಹಿಳೆಯ ಮಾನ ಭಂಗಕ್ಕೆ ಯತ್ನಿಸಿ , ಕೊಲೆ ಬೆದರಿಕೆ ಪ್ರಕರಣ : ಆರೋಪಿಗೆ...

ಬೆಳ್ತಂಗಡಿ: ಬೆಳ್ತಂಗಡಿ ಮಹಿಳೆಯ ಮಾನ ಭಂಗಕ್ಕೆ ಯತ್ನಿಸಿ , ಕೊಲೆ ಬೆದರಿಕೆ ಪ್ರಕರಣ : ಆರೋಪಿಗೆ ನ್ಯಾಯಾಂಗ ಬಂಧನ

- Advertisement -
- Advertisement -

ಬೆಳ್ತಂಗಡಿ : ಇಲ್ಲಿನ ನಾವೂರು ಗ್ರಾಮದ ದೇಸೊಟ್ಟು ಎಂಬಲ್ಲಿ ವಿವಾಹಿತ ಮಹಿಳೆಯೊಬ್ಬರು ತನ್ನ ಮನೆಯ ಸಮೀಪದ ಗುಡ್ಡಕ್ಕೆ ಕಟ್ಟಿಗೆ ತರಲು ಹೋದಾಗ ಯುವಕನೊಬ್ಬ ಮಹಿಳೆ ಮೇಲೆ ಮಾನಭಂಗಕ್ಕೆ ಯತ್ನಿಸಿ ನಂತರ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬೆಳ್ತಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ‌.


ಇದೇ 22ನೇ ತಾರೀಕಿನಂದು ಸಂಜೆ 4 ಗಂಟೆ ಸುಮಾರಿಗೆ ಮಹಿಳೆ ತನ್ನ ಮನೆಯ ಸಮೀಪದ ಗುಡ್ಡೆಗೆ ಕಟ್ಟಿಗೆ ತರಲು ಹೋಗಿದ್ದಾಗ ಇಂದಬೆಟ್ಟು ಗ್ರಾಮದ ಲಿಂಗತ್ಯಾರ್ ನಿವಾಸಿ ಸಂತೋಷ್@ಸಂತು (25) ಎಂಬಾತ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದ. ಅಲ್ಲದೇ ಯಾರಿಗಾದರೂ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದ.
ಘಟನೆಯ ಬಳಿಕ ಮಹಿಳೆ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದು ಅದರಂತೆ ಪೊಲೀಸರು 354(A),506 ಪ್ರಕರಣ ದಾಖಲಿಸಿಕೊಂಡು ಆರೋಪಿ ಸಂತೋಷ್ ನನ್ನು ಬೆಳ್ತಂಗಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.

- Advertisement -

Latest News

error: Content is protected !!