Thursday, June 4, 2026
Homeತಾಜಾ ಸುದ್ದಿಬಾಡಿಗೆ ಮನೆ ನೆಪದಲ್ಲಿ ವೃದ್ಧೆಯೊಬ್ಬರ ಕೈ-ಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿ ಪರಾರಿ, ಕಳ್ಳ ಅರೆಸ್ಟ್ !

ಬಾಡಿಗೆ ಮನೆ ನೆಪದಲ್ಲಿ ವೃದ್ಧೆಯೊಬ್ಬರ ಕೈ-ಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿ ಪರಾರಿ, ಕಳ್ಳ ಅರೆಸ್ಟ್ !

- Advertisement -
- Advertisement -

ಬೆಂಗಳೂರು: ಬಾಡಿಗೆಗೆ ಮನೆ ಬೇಕು ಎಂದು ಕೇಳುವ ನೆಪದಲ್ಲಿ ಮನೆಗೆ ಹೋಗಿ ವೃದ್ಧೆಯೊಬ್ಬರ ಕೈ-ಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿದ್ದ ಕಿಡಿಗೇಡಿ ಜ್ಞಾನಭಾರತಿ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಬಾಲಾಜಿ ಲೇಔಟ್‌ ನಿವಾಸಿ ಕಿರಣ್‌ ಕುಮಾರ್‌ ಬಂಧಿತ ಆರೋಪಿ. ಈತನಿಂದ 9 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿಯಾಗಿದೆ. ಕೆಲ ದಿನಗಳ ಹಿಂದೆ ಸರ್‌ ಎಂ.ವಿಶ್ವೇಶ್ವರಯ್ಯ ಲೇಔಟ್‌ನ 6ನೇ ಹಂತದ ರಾಜ್ಯ ಆರೋಗ್ಯ ಇಲಾಖೆಯ ನಿವೃತ್ತ ಉದ್ಯೋಗಿ ಶಾಂತಮ್ಮ(70) ಅವರ ಮನೆಯಲ್ಲಿ ಆರೋಪಿ ಈ ಕೃತ್ಯ ಎಸಗಿದ್ದ.

ತಮಿಳುನಾಡು ಮೂಲದ ಕಿರಣ್‌, ಬಾಲಾಜಿ ಲೇಔಟ್‌ನಲ್ಲಿ ತನ್ನ ಗೆಳತಿ ಜತೆ ವಾಸಿಸುತ್ತಿದ್ದ. ಕ್ಯಾಬ್‌ ಚಾಲಕನಾಗಿರುವ ಆತ, ಹಣದಾಸೆಗೆ ಕಳ್ಳತನ ಮಾಡುತ್ತಿದ್ದ. ಆತನ ಮೇಲೆ ರಾಜಗೋಪಾಲ ನಗರ ಹಾಗೂ ವಿಜಯಪುರ ಠಾಣೆಗಳಲ್ಲಿ ಪ್ರಕರಣಗಳಿವೆ. ಸರ್‌ ಎಂ.ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಶಾಂತಮ್ಮ ಅವರನ್ನು ಬೆದರಿಸಿ ಆತ ಚಿನ್ನಾಭರಣ ದೋಚಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!