Friday, June 5, 2026
Homeಕರಾವಳಿಉಡುಪಿಕಾರ್ಕಳದಲ್ಲಿ ಕಂದಾಯ ಮೇಳಕ್ಕೆ ಚಾಲನೆ

ಕಾರ್ಕಳದಲ್ಲಿ ಕಂದಾಯ ಮೇಳಕ್ಕೆ ಚಾಲನೆ

- Advertisement -
- Advertisement -

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕಂದಾಯ ಮೇಳಕ್ಕೆ ಚಾಲನೆ ನೀಡಲಾಗಿದೆ. ಕುಕ್ಕುಂದೂರು ಗ್ರಾಮ ಪಂಚಾಯತ್ ಮೈದಾನದಲ್ಲಿ ಕಂದಾಯ ಮೇಳ ಆಯೋಜಿಸಲಾಗಿದ್ದು, ಕಂದಾಯ ಸಚಿವ ಆರ್. ಅಶೋಕ್ ಮೇಳವನ್ನು ಉದ್ಘಾಟನೆ ಮಾಡಿದರು. ಈ ವೇಳೆ 4327 ಜನರಿಗೆ ಸರ್ಕಾರಿ ಸೌಲಭ್ಯ ಮತ್ತು 1700 ಹಿರಿಯ ನಾಗರಿಕರಿಗೆ ವಿವಿಧ ರೀತಿಯ ಪಿಂಚಣಿಗಳನ್ನು ಸಚಿವ ಅಶೋಕ್ ವಿತರಿಸಿದರು.

ಸಮಾರಂಭದಲ್ಲಿ ಕಾರ್ಕಳ ಶಾಸಕ ಮತ್ತು ಇಂಧನ ಸಚಿವ ವಿ. ಸುನಿಲ್ ಕುಮಾರ್, ಕಾಪು ಶಾಸಕ ಲಾಲಾಜಿ ಮೆಂಡನ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಾಗೂ ಉಡುಪಿ ಜಿಲ್ಲಾಡಳಿತದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!