Saturday, June 6, 2026
Homeಕರಾವಳಿಸೋಮೇಶ್ವರ ಕಡಲತೀರದಲ್ಲಿ ಒಂದೇ ವಾರದಲ್ಲಿ ಮತ್ತೊಬ್ಬ ವ್ಯಕ್ತಿ ಶವವಾಗಿ ಪತ್ತೆ !

ಸೋಮೇಶ್ವರ ಕಡಲತೀರದಲ್ಲಿ ಒಂದೇ ವಾರದಲ್ಲಿ ಮತ್ತೊಬ್ಬ ವ್ಯಕ್ತಿ ಶವವಾಗಿ ಪತ್ತೆ !

- Advertisement -
- Advertisement -

ಮಂಗಳೂರು: ಬಿಲ್ಡರ್ ಕಮ್ ಇಂಜಿನಿಯರ್‌ನ ಶವ ಪತ್ತೆಯಾದ ಒಂದು ವಾರದ ನಂತರ, ನಾಪತ್ತೆಯಾಗಿದ್ದ 32 ವರ್ಷದ ವ್ಯಕ್ತಿಯೊಬ್ಬರು ಫೆಬ್ರವರಿ 13 ರ ಭಾನುವಾರದಂದು ಅದೇ ಸೋಮೇಶ್ವರ ಬೀಚ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮೃತರನ್ನು ಸಂಕೋಳಿಗೆ ನಿವಾಸಿ ಭಾಸ್ಕರ್ ನಾಯ್ಕ್ ಎಂದು ಗುರುತಿಸಲಾಗಿದೆ.

ಶನಿವಾರ ರಾತ್ರಿ ಭಾಸ್ಕರ್ ನಾಪತ್ತೆಯಾಗಿದ್ದು, ಕುಟುಂಬಸ್ಥರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ನಂತರ ಉಳ್ಳಾಲ ಠಾಣೆಯಲ್ಲಿ ಕಾಣೆ ದೂರು ದಾಖಲಿಸಿದ್ದರು.

ಸೋಮೇಶ್ವರ ಕಡಲತೀರದಲ್ಲಿ ಇಂದು ಸಂಜೆ ಬಾಸ್ಕರ್ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!