Monday, June 15, 2026
Homeಕರಾವಳಿಉಡುಪಿಉಡುಪಿ: ಆಸ್ತಿ ವಿಚಾರವಾಗಿ ನವವಿವಾಹಿತ ಮಹಿಳೆಯೊಬ್ಬರಿಗೆ ತನ್ನ ಸೋದರ ಮಾವನಿಂದ ಕತ್ತಿಯಿಂದ ಕಡಿದು ಹಲ್ಲೆ

ಉಡುಪಿ: ಆಸ್ತಿ ವಿಚಾರವಾಗಿ ನವವಿವಾಹಿತ ಮಹಿಳೆಯೊಬ್ಬರಿಗೆ ತನ್ನ ಸೋದರ ಮಾವನಿಂದ ಕತ್ತಿಯಿಂದ ಕಡಿದು ಹಲ್ಲೆ

- Advertisement -
- Advertisement -

ಉಡುಪಿ: ಮಣಿಪಾಲದ ಬಳಿ ಆಸ್ತಿ ವಿಚಾರವಾಗಿ ನವವಿವಾಹಿತ ಮಹಿಳೆಯೊಬ್ಬರಿಗೆ ತನ್ನ ಸೋದರ ಮಾವನೇ ಕತ್ತಿಯಿಂದ ಕಡಿದು ಹಲ್ಲೆ ನಡೆಸಿರುವ ಘಟನೆ ಉಡುಪಿ ತಾಲೂಕಿನ ಪರ್ಕಳ ಹೆರ್ಗದ ಗರಡಿ ಬಳಿ ಸಂಭವಿಸಿದೆ. ಹಲ್ಲೆಗೆ ಒಳಗಾದ ಮಹಿಳೆಯನ್ನು ದೀಪಾ ನಾಯಕ್ (28) ಎಂದು ಗುರುತಿಸಲಾಗಿದೆ. ಹಾಗು ಆರೋಪಿಯನ್ನು ಜಗದೀಶ್ ನಾಯಕ್ ಎಂದು ಗುರುತಿಸಲಾಗಿದೆ.

ಆಸ್ಪತ್ರೆಗೆ ದಾಖಲಾದ ದೀಪಾ ಅವರ ಪತಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಮೂರ ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಬುಧವಾರ ಬೆಳಿಗ್ಗೆ 11.30 ರ ಸುಮಾರಿಗೆ ದೀಪಾ ನಾಯಕ್ ಅವರು ಮನೆಯ ಹೊರಗೆ ನಿಂತು ಪಕ್ಕದ ಮನೆಯವರು ನಡೆಸುತ್ತಿದ್ದ ಸರ್ವೆಯನ್ನು ನೋಡುತ್ತಿದ್ದಾಗ, ಆರೋಪಿ ಜಗದೀಶ್ ನಾಯಕ್ ಆಸ್ತಿ ವಿಚಾರದ ಪೂರ್ವ ದ್ವೇಷದಿಂದ ದೀಪಾ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು, ತನ್ನ ಕೈಯಲ್ಲಿದ್ದ ಕತ್ತಿಯಿಂದ ತಲೆಯ ಹಿಂಬದಿಗೆ ಹೊಡೆದು ಹಲ್ಲೆ ನಡೆಸಿದ್ದಾನೆ.

ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಣಿಪಾಲ ಪೊಲೀಸರು ಹಲ್ಲೆ ಪ್ರಕರಣ ದಾಖಲಿಸಿಕೊಂಡು ವಿಚಾರಣ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!