Saturday, June 13, 2026
Homeಕರಾವಳಿಕಲ್ಲಿದ್ದಲು ಸಾಗಾಟದ ಲಾರಿ ಪಲ್ಟಿ- ಚಾಲಕ ಪ್ರಾಣಾಪಾಯದಿಂದ ಪಾರು

ಕಲ್ಲಿದ್ದಲು ಸಾಗಾಟದ ಲಾರಿ ಪಲ್ಟಿ- ಚಾಲಕ ಪ್ರಾಣಾಪಾಯದಿಂದ ಪಾರು

- Advertisement -
- Advertisement -

ಮಂಗಳೂರು: ಕಲ್ಲಿದ್ದಲು ಸಾಗಾಟದ ಲಾರಿಯೊಂದು ಪಲ್ಟಿಯಾದ ಘಟನೆ ನಗರದ ಹೊರವಲಯದ ಪಡೀಲ್ ಎಂಬಲ್ಲಿ ಇಂದು ಮುಂಜಾನೆ ನಡೆದಿದೆ. ರಸ್ತೆ ಅಫಘಾತದಲ್ಲಿ ಚಾಲಕನ ಕಾಲು ವಾಹನಕ್ಕೆ ಸುಲುಕಿಕೊಂಡಿದ್ದರು.

ಘಟನೆಯಲ್ಲಿ ಲಾರಿಯಲ್ಲಿದ್ದ ಕಲ್ಲಿದ್ದಲು ರಸ್ತೆಗೆ ಚೆಲ್ಲಿದ್ದು ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಇನ್ನು ರಸ್ತೆಯಿಂದ ಲಾರಿಯನ್ನು ಮೇಲೆತ್ತಲು ಯಂತ್ರವನ್ನು ಬಳಸಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಚಾಲಕನನ್ನು ಹೊರತೆಗೆದು ಆಸ್ಪತ್ರೆಗೆ ‌ದಾಖಲಿಸಿದ್ದಾರೆ. ಸ್ಥಳಕ್ಕೆ ಸಂಚಾರ ದಕ್ಷಿಣ ಠಾಣೆಯ ಪೊಲೀಸರು ತೆರಳಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

- Advertisement -

Latest News

error: Content is protected !!