Friday, June 5, 2026
Homeತಾಜಾ ಸುದ್ದಿಉಪ್ಪಿನಂಗಡಿ: ಗೂಡ್ಸ್ ಟೆಂಪೋ ಬೈಕ್ ಗೆ ಡಿಕ್ಕಿ; ಅರ್ಚಕರಿಗೆ ಗಾಯ

ಉಪ್ಪಿನಂಗಡಿ: ಗೂಡ್ಸ್ ಟೆಂಪೋ ಬೈಕ್ ಗೆ ಡಿಕ್ಕಿ; ಅರ್ಚಕರಿಗೆ ಗಾಯ

- Advertisement -
- Advertisement -

ಉಪ್ಪಿನಂಗಡಿ: ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ಎಂಬಲ್ಲಿ ಗೂಡ್ಸ್ ಟೆಂಪೋವೊoದು ಬೈಕಿಗೆ ಡಿಕ್ಕಿಯಾಗಿ ಸವಾರ ಗಾಯಗೊಂಡಿರುವ ಘಟನೆ ನಡೆದಿದೆ.


ಗಾಯಗೊಂಡ ವ್ಯಕ್ತಿಯನ್ನು ಬೆಳ್ಳಿಪಾಡಿ ಶ್ರೀ ಸುಬ್ರಮಣ್ಯೇಶ್ವರ ದೇವಸ್ಥಾನದ ಅರ್ಚಕ ಶ್ರೀಕಾಂತ್ ಭಟ್ ಎಂದು ಹೇಳಲಾಗಿದೆ.


ಉಪ್ಪಿನಂಗಡಿ ಕಡೆಯಿಂದ ಪೆರ್ನೆ ಕಡೆಗೆ ಸಾಗುತ್ತಿದ್ದ ಬೈಕ್ ಗೆ ಎದುರು ಅತಿಯಾದ ವೇಗದಿಂದ ಬರುತ್ತಿದ್ದ ಗೂಡ್ಸ್ ಟೆಂಪೋ ಒಂದು ಡಿಕ್ಕಿ ಹೊಡೆದ ಪರಿಣಾಮ ಅರ್ಚಕರು ಮತ್ತು ಬೈಕ್ ಬದಿಯಲ್ಲಿರುವ ಚರಂಡಿಗೆ ಬಿದ್ದಿದ್ದಾರೆ. ಸವಾರನ ಕಾಲಿಗೆ ಪೆಟ್ಟಾಗಿದ್ದು, ಟೆಂಪೋ ಸವಾರ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.


ಗಾಯಾಳುವನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!