Wednesday, May 15, 2024
Homeಅಪರಾಧಮಂಗಳೂರು: ಅಪ್ರಾಪ್ತ ವಿದ್ಯಾರ್ಥಿಗಳು, ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿ ದಂಧೆ- ಅಪಾರ್ಟ್ಮೆಂಟ್ ಮಾಲಕಿ ಹಾಗು...

ಮಂಗಳೂರು: ಅಪ್ರಾಪ್ತ ವಿದ್ಯಾರ್ಥಿಗಳು, ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿ ದಂಧೆ- ಅಪಾರ್ಟ್ಮೆಂಟ್ ಮಾಲಕಿ ಹಾಗು ಆಕೆಯ ಪತಿ ಸೇರಿದಂತೆ ಐವರು ಅರೆಸ್ಟ್

spot_img
- Advertisement -
- Advertisement -

ಮಂಗಳೂರು: ನಂದಿಗುಡ್ಡೆ ಬಳಿಯ ಎಸ್ ಎಮ್. ಆರ್. ಲಿಯಾನ ರೆಸಿಡೆನ್ಸಿ ಅಪಾರ್ಟ್ಮೆಂಟ್ ನಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳು, ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿ ದಂಧೆ ನಡೆಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಸಂತ್ರಸ್ತ ಬಾಲಕಿಯೊಬ್ಬಳು ನೀಡಿದ ದೂರಿನಂತೆ ಪ್ರಕರಣದ ಕಿಂಗ್ ಪಿನ್ ಮಹಿಳೆ, ಆಕೆಯ ಪತಿ ಸೇರಿದಂತೆ ಐವರನ್ನು ಬಂಧಿಸಲಾಗಿದೆ‌.

ಬಂಧಿತ ಆರೋಪಿಗಳನ್ನು ಅಪಾರ್ಟ್ ಮೆಂಟ್ ಮಾಲಕಿ ಶಮೀನಾ, ಶಮೀನಾಳ ಗಂಡ ಸಿರಿಕ್, ಇಬ್ಬರು ಅಪರಿಚಿತರು ಹಾಗೂ ಆಯಿಶಮ್ಮ ಎಂದು ಗುರುತಿಸಲಾಗಿದೆ. ಅಲ್ಲದೇ ವೇಶ್ಯಾವಾಟಿಕೆ ದಂಧೆಗೆ ಸಹಕರಿಸಿದ ಇತರ ಮೂವರು ಅಪರಿಚಿತರು ಪರಾರಿಯಾಗಿದ್ದಾರೆ ಎಂದು‌ ಪೊಲೀಸರು‌ ಮಾಹಿತಿ‌ ನೀಡಿದ್ದಾರೆ.

17 ವರ್ಷದ ಅಪ್ರಾಪ್ತ ನೊಂದ ಬಾಲಕಿ ದೂರಿನ ಮೇರೆಗೆ ಅತ್ತಾವರ ನಂದಿಗುಡ್ಡೆ ಬಳಿಯ ಎಸ್.ಎಮ್.ಆರ್.ಲಿಯಾನ ರೆಸಿಡೆನ್ಸಿ ಅಪಾರ್ಟ್ಮೆಂಟ್ ನಲ್ಲಿ ಅಪ್ರಾಪ್ತ ಬಾಲಕಿಯರನ್ನು ಹಾಗೂ ಮಹಿಳೆಯರನ್ನು ಒತ್ತಾಯ ಪೂರ್ವಕವಾಗಿ, ಆಮಿಷ ಒಡ್ಡಿ ಹಾಗೂ ಬ್ಲ್ಯಾಕ್ ಮೇಲ್ ಮಾಡಿ ಹೆದರಿಸಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಬಗ್ಗೆ ಆರೋಪಿಗಳ ವಿರುದ್ಧ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸಿದ್ದು, ಲಿಯಾನ ಅಪಾರ್ಟ್ ಮೆಂಟ್ ನಲ್ಲಿ ಬಾಡಿಗೆ ಮನೆಯೊಂದನ್ನು ಪಡೆದಿರುವ ವೇಶ್ಯಾವಾಟಿಕೆಯ ಕಿಂಗ್ ಪಿನ್ ಶಮೀನಾ ತನ್ನ ಗಂಡ ಸಿದ್ದಿಕ್ ನ ಸಹಾಯದಿಂದ ಈ ದಂಧೆಯನ್ನು ನಡೆಸುತ್ತಿದ್ದು, ಇದಕ್ಕೆ ಆಯಿಶಮ್ಮ ಎನ್ನುವ ಮಹಿಳೆ ಹಾಗೂ ಇನ್ನೂ ಕೆಲವರು ಸಹಕರಿಸುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.

ಬಂಧಿತ ಆರೋಪಿಗಳು ಕಾಲೇಜಿಗೆ ಹೋಗುವ ಅಮಾಯಕ ಹೆಣ್ಣು ಮಕ್ಕಳಿಗೆ ವಿವಿಧ ಆಮಿಷಗಳನ್ನು ಒಡ್ಡಿ, ಇನ್ನೂ ಕೆಲವು ಸಂದರ್ಭಗಳಲ್ಲಿ ಅಪ್ರಾಪ್ತ ಬಾಲಕಿಯರಿಗೆ ಬ್ಲ್ಯಾಕ್ ಮೇಲ್ ಮಾಡಿ ಹೆದರಿಸಿ ವೇಶ್ಯಾವಾಟಿಕೆ ಬಳಸಿಕೊಂಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಆರೋಪಿಗಳ ವಶದಲ್ಲಿದ್ದ 5 ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ತಾಂತ್ರಿಕ ಪರೀಕ್ಷೆಗೆ ಒಳಪಡಿಸಿ ಈ ಜಾಲದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಪತ್ತೆ ಮಾಡಲು ಕ್ರಮ ಕೈಗೊಂಡಿದ್ದು ಈ ಬಗ್ಗೆ ಪ್ರತ್ಯೇಕ ತಂಡಗಳನ್ನು ರಚಿಸಲಾಗಿರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆ ಮೊ.ನಂ 08/2022 ಕಲಂ 363,354 ( ಎ ) 376,506 ಜೊತೆಗೆ 34 ಐಪಿಸಿ ಕಲಂ 4,6 ಪೊಕ್ಸೊ ಕಾಯಿದೆ ಹಾಗೂ ಕಲಂ 34,5,8 , ಐ ಟಿ.ಪಿ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!