Saturday, June 6, 2026
Homeತಾಜಾ ಸುದ್ದಿಬಂಟ್ವಾಳ: ಆಟೋರಿಕ್ಷಾ ಗ್ಯಾಸ್ ಸಿಲಿಂಡರ್ ಸ್ಪೋಟ; ಓರ್ವನಿಗೆ ಗಾಯ

ಬಂಟ್ವಾಳ: ಆಟೋರಿಕ್ಷಾ ಗ್ಯಾಸ್ ಸಿಲಿಂಡರ್ ಸ್ಪೋಟ; ಓರ್ವನಿಗೆ ಗಾಯ

- Advertisement -
- Advertisement -

ಬಂಟ್ವಾಳ: ಪರಂಗಿಪೇಟೆ ಸಮೀಪದ ಅಮ್ಮೆಮಾರ್ ಎಂಬಲ್ಲಿ ಆಟೋರಿಕ್ಷಾ ಗ್ಯಾಸ್ ಸಿಲಿಂಡರ್ ಕತ್ತರಿಸುತ್ತಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡು ವ್ಯಕ್ತಿಯೋರ್ವ ಗಾಯಗೊಂಡಿರುವ ಘಟನೆ ಜ.29 ರಂದು ಶನಿವಾರ ನಡೆದಿದೆ.


ಅಮ್ಮೆಮಾರ್ ನಿವಾಸಿಯೊಬ್ಬರ ಮನೆಯಲ್ಲಿ ಗುಜರಿಗೆ ಬಂದಿದ್ದ ಆಟೋ ಗ್ಯಾಸ್ ಸಿಲಿಂಡರ್ ಕತ್ತರಿಸಲು ವ್ಯಕ್ತಿಯೊಬ್ಬರು ಅವರ ರಿಕ್ಷಾದಲ್ಲಿ ಬಂದಿದ್ದು, ಸಿಲಿಂಡರ್ ಕತ್ತರಿಸುವ ವೇಳೆ ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ. ರಿಕ್ಷಾದಲ್ಲಿದ್ದ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ.

- Advertisement -

Latest News

error: Content is protected !!