Friday, June 5, 2026
Homeಕರಾವಳಿಮಂಗಳೂರು: ಪಿಕಪ್ ಚಾಲಕನ ನಿರ್ಲಕ್ಷ್ಯ, ವೃದ್ಧರೊಬ್ಬರ ಸಾವು !

ಮಂಗಳೂರು: ಪಿಕಪ್ ಚಾಲಕನ ನಿರ್ಲಕ್ಷ್ಯ, ವೃದ್ಧರೊಬ್ಬರ ಸಾವು !

- Advertisement -
- Advertisement -

ಮಂಗಳೂರು: ಹಿಮ್ಮುಖವಾಗಿ ಹೋಗುತ್ತಿದ್ದ ಪಿಕಪ್ ವಾಹನ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಪರಿಣಾಮ ಮನೆಯ ಮುಂಭಾಗದ ಅಂಗಳದಲ್ಲಿ ನಿಂತಿದ್ದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.

ಇಲ್ಲಿನ ಶಕ್ತಿನಗರದ ಕಕ್ಕೆಬೆಟ್ಟು ಲೇಬರ್ ಕಾಲೋನಿಯಲ್ಲಿ ಅಪಘಾತ ಸಂಭವಿಸಿದೆ. ಮೃತರನ್ನು ಕೊರಗಪ್ಪ (85) ಎಂದು ಗುರುತಿಸಲಾಗಿದೆ.

ಅವರು ತಮ್ಮ ಮನೆಯ ಮುಂಭಾಗದ ಅಂಗಳದಲ್ಲಿ ನಿಂತಿದ್ದಾಗ ಮೋಹನ್ ಚಲಾಯಿಸುತ್ತಿದ್ದ ನೋಂದಣಿ ಸಂಖ್ಯೆ ಕೆಎ 19 ಎಡಿ 2189 ರ ಫ್ಲೋರಿಂಗ್ ಟೈಲ್ಸ್ ತುಂಬಿದ ಪಿಕಪ್ ವಾಹನವು ಸಮೀಪದಲ್ಲಿ ರಿವರ್ಸ್ ತೆಗೆದುಕೊಳ್ಳುತ್ತಿದೆ. ಚಾಲಕ ನಿರ್ಲಕ್ಷ್ಯದಿಂದ ವಾಹನವನ್ನು ಹಿಂಬದಿ ಗಮನಿಸದೆ ಹಿಮ್ಮುಖವಾಗಿಟ್ಟು ಕೊರಗಪ್ಪ ಎಂಬುವರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

ಬಿದ್ದ ರಭಸಕ್ಕೆ ಕೊರಗಪ್ಪ ಅವರ ತಲೆಗೆ ಗಾಯವಾಗಿದೆ. ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!