Sunday, June 29, 2025
Homeಕರಾವಳಿಕಾಸರಗೋಡು: ಡ್ರಗ್ಸ್ ದಂಧೆ- ಮೂವರ ಬಂಧನ, ಎರಡು ಕಾರು, 16 ಕೆಜಿ ಗಾಂಜಾ ವಶ !

ಕಾಸರಗೋಡು: ಡ್ರಗ್ಸ್ ದಂಧೆ- ಮೂವರ ಬಂಧನ, ಎರಡು ಕಾರು, 16 ಕೆಜಿ ಗಾಂಜಾ ವಶ !

spot_img
- Advertisement -
- Advertisement -

ಕಾಸರಗೋಡು: ಪೊಲೀಸರು ಮತ್ತು ಆ್ಯಂಟಿ ನಾರ್ಕೋಟಿಕ್ ಸೆಲ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಅವರ ಬಳಿಯಿದ್ದ 16 ಕಿಲೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಜೇಶ್ವರದ ಕುಂಜತ್ತೂರಿನಲ್ಲಿ ಕಾರಿನಲ್ಲಿ ಸಾಗಿಸಲಾಗುತ್ತಿದ್ದ ನಾಲ್ಕು ಕೆಜಿ ಗಾಂಜಾವನ್ನು ಕಾಸರಗೋಡು ಉಪ ಪೊಲೀಸ್ ವರಿಷ್ಠಾಧಿಕಾರಿ ಬಾಲಕೃಷ್ಣನ್ ನಾಯರ್ ಮತ್ತು ಮಾದಕ ದ್ರವ್ಯ ಕೋಶದ ಉಪ ಪೊಲೀಸ್ ಆಯುಕ್ತ ಎಂ ಎ ಮ್ಯಾಥ್ಯೂ ನೇತೃತ್ವದ ತಂಡ ವಶಪಡಿಸಿಕೊಂಡಿದೆ. ಈ ಪ್ರಕರಣದಲ್ಲಿ ಬಂಧಿತ ವ್ಯಕ್ತಿಯನ್ನು ಕುಂಜತ್ತೂರಿನ ಜಿಎಚ್‌ಎಸ್‌ಎಸ್ ಶಾಲಾ ರಸ್ತೆ ನಿವಾಸಿ ಯಾಸೀನ್ ಇಮ್ರಾನ್ (33) ಎಂದು ಗುರುತಿಸಲಾಗಿದೆ.

ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುಳಿಯಾರ್ ಎಂಬಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಒಟ್ಟು 12 ಕೆಜಿ ಗಾಂಜಾವನ್ನು ಮಾದಕ ದ್ರವ್ಯ ನಿಗ್ರಹ ದಳದ ಸಿಬ್ಬಂದಿ ಹಾಗೂ ಆದೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಪುರುಷರನ್ನು ಬಂಧಿಸಲಾಯಿತು. ಅಜನೂರು ಕೊಡಂಕೋಡು ಮದಗರ ನಿವಾಸಿಗಳಾದ ಅಹ್ಮದ್ ಕಬೀರ್ (32) ಮತ್ತು ಅಬ್ದುಲ್ ರೆಹಮಾನ್ ಸಫ್ವಾನ್ (23) ಬಂಧಿತರು.

- Advertisement -
spot_img

Latest News

error: Content is protected !!