Wednesday, June 24, 2026
Homeಕರಾವಳಿಕಡಬ: ಕಲ್ಲು ಸಾಗಾಟದ ಲಾರಿಯೊಂದು ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬೈಕಿಗೆ ಡಿಕ್ಕಿ !

ಕಡಬ: ಕಲ್ಲು ಸಾಗಾಟದ ಲಾರಿಯೊಂದು ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬೈಕಿಗೆ ಡಿಕ್ಕಿ !

- Advertisement -
- Advertisement -

ಕಡಬ: ಕಲ್ಲು ಸಾಗಾಟದ ಲಾರಿಯೊಂದು ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಬೈಕ್ ಗೆ ಸ್ವಲ್ಪವೇ ಅಂತರದಲ್ಲಿ ತಾಗಿದ ಪರಿಣಾಮ ಬೈಕ್ ಸವಾರ ಚರಂಡಿಗೆ ಬಿದ್ದಿದ್ದಾನೆ. ಆದರೆ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆ ಬಲ್ಯ ಸಮೀಪದಲ್ಲಿ ರಾತ್ರಿ ನಡೆದಿದೆ.

ಬಲ್ಯದಿಂದ ಕಡಬಕ್ಕೆ ಬರುತ್ತಿದ್ದ ಬೈಕ್ ಸವಾರ ಬಲ್ಯದ ಚಾಲಕ ಕಡಬದಿಂದ ಉಪ್ಪಿನಂಗಡಿ ಮಾರ್ಗವಾಗಿ ತೆರಳುತ್ತಿದ್ದ ಹಾಗೇ ವಿಟ್ಲ ಮೂಲದ ಕಲ್ಲು ಸಾಗಾಟದ ಲಾರಿಯ ಹಿಂಬದಿ ತಾಗಿದೆ ಎನ್ನಲಾಗಿದೆ. ನಂತರ ಆತ ಪರಾರಿಯಾಗಿದ್ದ.

ಬೈಕ್ ಸವಾರ ಕೂಡಲೇ ಸ್ನೇಹಿತರಿಗೆ ಮಾಹಿತಿ ನೀಡಿದ್ದು ಲಾರಿಯನ್ನು ಆಲಂಕಾರು ಸಮೀಪ ಸ್ಥಳೀಯರು ಅಟ್ಟಗಟ್ಟಿ ಆತನನ್ನು ಹಿಡಿದಿದ್ದಾರೆ. ಈ ನಡುವೆ ಪೊಲೀಸರಿಗೂ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಎ.ಎಸ್ ಐ ಸುರೇಶ್ ನೇತೃತ್ವದ ಪೊಲೀಸರು ತ್ವರಿತವಾಗಿ ಸ್ಥಳಕ್ಕೆ ತೆರಳಿ ಲಾರಿಯನ್ನು ವಶಪಡಿಸಿಕೊಂಡು ಠಾಣೆಗೆ ತಂದಿದ್ದಾರೆ.

ಬೈಕ್ ಗೆ ಸ್ವಲ್ಪ ಹಾನಿಯಾಗಿದ್ದು ಬೈಕ್ ದುರಸ್ತಿಗೆ ತಗಲುವ ವೆಚ್ಚ ನೀಡಿದ ಬಳಿಕ ಮಾತುಕತೆ ಮೂಲಕ ಬಗೆಹರಿಸಲಾಗಿದೆ.

- Advertisement -

Latest News

error: Content is protected !!