Tuesday, June 9, 2026
Homeಕರಾವಳಿಮಂಗಳೂರು: ಶ್ರೀ ಗಣೇಶ ಆಂಬ್ಯುಲೆನ್ಸ್ ಮಾಲಕ ಗಂಗಾಧರ ಅತ್ತಾವರ ನಿಧನ

ಮಂಗಳೂರು: ಶ್ರೀ ಗಣೇಶ ಆಂಬ್ಯುಲೆನ್ಸ್ ಮಾಲಕ ಗಂಗಾಧರ ಅತ್ತಾವರ ನಿಧನ

- Advertisement -
- Advertisement -

ಮಂಗಳೂರು: ಶ್ರೀ ಗಣೇಶ ಆಂಬ್ಯುಲೆನ್ಸ್ ಸೇವೆಯ ಮಾಲೀಕರಾಗಿದ್ದ ಅತ್ತಾವರ ನಿವಾಸಿ ಗಂಗಾಧರ ಅತ್ತಾವರ (62) ಅವರು ಕೊನೆಯುಸಿರೆಳೆದಿದ್ದಾರೆ.

ಮೂರು ದಿನಗಳ ಹಿಂದೆ ಅಸ್ವಸ್ಥರಾದ ಅವರು ನಗರದ ಹೈಲ್ಯಾಂಡ್ ಮತ್ತು ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಕೊಡಿಸಲು ನಡೆಸಿದ ಪ್ರಯತ್ನ ವಿಫಲವಾಗಿದ್ದು, ಅವರು ಪ್ರಾಣ ಕಳೆದುಕೊಂಡಿದ್ದಾರೆ.

ಒಂದೇ ಆಂಬ್ಯುಲೆನ್ಸ್‌ನಲ್ಲಿ ಸೇವೆಯನ್ನು ಪ್ರಾರಂಭಿಸಿದ ಅತ್ತಾವರ ಅವರು ಕಳೆದ 35 ವರ್ಷಗಳಿಂದ 18 ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ಪಡೆದುಕೊಂಡಿದ್ದಾರೆ. ಹಲವು ಚಾಲಕರಿಗೆ ಉದ್ಯೋಗ ಕಲ್ಪಿಸಿದ್ದರು.

ಕೋವಿಡ್ 19 ಅವಧಿಯಲ್ಲಿ ಸಲ್ಲಿಸಿದ ಅವರ ನಿಸ್ವಾರ್ಥ ಸೇವೆಗಳನ್ನು ಇಂದಿಗೂ ಎಲ್ಲರೂ ಕೃತಜ್ಞತೆಯಿಂದ ಸ್ಮರಿಸುತ್ತಿದ್ದಾರೆ.

- Advertisement -

Latest News

error: Content is protected !!