Saturday, June 6, 2026
Homeಕರಾವಳಿಸುಳ್ಯ: ಅಂಗಡಿಯ ಕೋಣೆಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಮಾಲೀಕ !

ಸುಳ್ಯ: ಅಂಗಡಿಯ ಕೋಣೆಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಮಾಲೀಕ !

- Advertisement -
- Advertisement -

ಸುಳ್ಯದ ಅಡ್ತಲೆ ಎಂಬಲ್ಲಿ ಗ್ರಾ.ಪಂ ಮಾಜಿ ಸದಸ್ಯರೊಬ್ಬರು ಅಂಗಡಿಯ ಕೋಣೆಯ ಒಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಮರ್ಕಂಜ ಗ್ರಾಮದ ಕಾಯರ ಭೋಜಪ್ಪ (48). ಇವರು ಅಡ್ತಲೆಯಲ್ಲಿ ಅಂಗಡಿಯನ್ನು ನಡೆಸುತ್ತಿದ್ದು ತನ್ನ ಅಂಗಡಿಯಲ್ಲೇ ನೇಣು ಬಿಗಿದುಕೊಂಡಿದ್ದಾರೆ. ಇವರು ಮರ್ಕಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿದ್ದರು.

ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಮೃತರು ಪತ್ನಿ ಭವಾನಿ , ಪುತ್ರಿ ರಕ್ಷಾ , ಪುತ್ರ ಯತಿನ್ ರನ್ನು ಅಗಲಿದ್ದಾರೆ .

- Advertisement -

Latest News

error: Content is protected !!