Thursday, June 4, 2026
Homeಕರಾವಳಿಬಂಟ್ವಾಳ: ಸಾಲದ ಹೊರೆ ತಾಳಲಾರದೆ ಉದ್ಯಮಿ ನೇಣಿಗೆ ಶರಣು

ಬಂಟ್ವಾಳ: ಸಾಲದ ಹೊರೆ ತಾಳಲಾರದೆ ಉದ್ಯಮಿ ನೇಣಿಗೆ ಶರಣು

- Advertisement -
- Advertisement -

ಬಂಟ್ವಾಳ: ಸಾಲದ ಹೊರೆ ತಾಳಲಾರದೆ ಉದ್ಯಮಿಯೊಬ್ಬರು ನೇಣಿಗೆ ಶರಣಾದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಸಾವಿನ ಕಾರಣವನ್ನು ಚೀಟಿಯಲ್ಲಿ ಬರೆದಿಟ್ಟುಕೊಂಡು ಬಿ.ಸಿ ರೋಡಿನ ಕೃಷ್ಣ ಪ್ರೈಮ್ ಹೋಟೆಲ್ ನ ರೂಮ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಸಾವನ್ನಪ್ಪಿದ ವ್ಯಕ್ತಿ ಕನಪಾದೆ ನಿವಾಸಿ ಕೃಷ್ಣ ಟಿ. ಎಂ ಎಂದು ತಿಳಿದು ಬಂದಿದೆ. ಇವರು ಐಸ್ಕ್ರೀಂ ಒಂದರ ಮಾಲಕರಾಗಿದ್ದು ಜೊತೆಗೆ ಕ್ಲಬ್ ಕೂಡ ನಡೆಸುತ್ತಿದ್ದರು. ತನ್ನ ಉದ್ಯಮದಲ್ಲಿ ನಷ್ಟವಾಗಿದ್ದು ಸಾಲ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಚೀಟಿಯಲ್ಲಿ ಬರೆದಿಟ್ಟು ಕಿಸೆಯಲ್ಲಿಟ್ಟಿದ್ದರು.

ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ತಾಣ ಎಸ್ಐ. ಅವಿನಾಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!